ಕ್ಯಾಲಿಪೋರ್ನಿಯಾ: ವೀಸಾ ನಿಯಮ ಉಲ್ಲಂಘನೆ ಹಾಗೂ ತೆರಿಗೆ ವಂಚಿಸಿದಕಾರಣಕ್ಕೆ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿ ಇನ್ಫೊಸಿಸ್, ಕ್ಯಾಲಿಫೋರ್ನಿಯಾ ಸರ್ಕಾರಕ್ಕೆ ಭಾರಿ ಪ್ರಮಾಣದ ದಂಡ ತೆರಬೇಕಾಗಿದೆ.
ಕ್ಯಾಲಿಫೋರ್ನಿಯಾಅಟರ್ನಿ ಜನರಲ್ ಕಚೇರಿ, ಕಂಪನಿ ವಂಚನೆ ಮಾಡಿರುವುದಾಗಿಆರೋಪಿಸಿದ್ದು, ಇನ್ಫೊಸಿಸ್ ಲಿಮಿಟೆಡ್, ಬಿಸಿನೆಸ್ ಕನ್ಸಲ್ಟಿಂಗ್, ಇನ್ಫರ್ಮೇಷನ್ ಟೆಕ್ನಾಲಜಿ ಎಂಡ್ ಔಟ್‌ಸೋರ್ಸಿಂಗ್ ಕಂಪನಿ ಮತ್ತು ಅದರ ಅಂಗಸಂಸ್ಥೆ, ಇನ್ಫೋಸಿಸ್ ಬಿಪಿಎಂ ಲಿಮಿಟೆಡ್‌ಗೆಒಟ್ಟು ₹5.68 ಕೋಟಿ ದಂಡ ವಿಧಿಸಿದೆ.
‘ತಪ್ಪು ವಿಸಾ ಅಡಿಯಲ್ಲಿ ಕಂಪನಿ ತನ್ನ ಕೆಲಸಗಾರರನ್ನು ಇಲ್ಲಿಗೆ ಕರೆತಂದಿದೆ ಮತ್ತು ಕ್ಯಾಲಿಫೋರ್ನಿಯಾದ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಂಡಿದೆ’ ಎಂದು ಕಚೇರಿ ದೂರಿದೆ.
‘ಕ್ಯಾಲಿಫೋರ್ನಿಯಾದಲ್ಲಿರುವ ಇನ್ಫೊಸಿಸ್ ಕಂಪನಿಯಲ್ಲಿ ಸುಮಾರು 500 ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಂಪನಿ ಎಚ್–1ಬಿ ವೀಸಾ ನೀಡುವ ಬದಲು ಬಿ–1 ವಿಸಾ ನೀಡಿದೆ. ರಾಜ್ಯ ತೆರಿಗೆ ಅಲ್ಲದೆಯೂ ಎಚ್–1ಬಿ ವೀಸಾ ನೀಡಿದರೆ, ಉದ್ಯೋಗಿಗಳಿಗೆ ಕಂಪನಿಯು ಸ್ಥಳೀಯ ವೇತನ ನೀಡಬೇಕಾಗುತ್ತದೆ. ಇದರಲ್ಲಿಯೂ ಕಂಪನಿ ವಂಚನೆ ಮಾಡಿದೆ’ ಎಂದು ಕಚೇರಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.