ಲಾಹೋರ್: ಮುಂಬೈ ದಾಳಿಯ ಸಂಚುಕೋರ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಮೂವರು ಸಹಚರರಿಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಸೋಮವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಹಫೀಜ್ ಸೇರಿದಂತೆ ಹಫೀಜ್ ಮಸೂದ್, ಅಮೀರ್ ಹಮ್ಜಾ ಮತ್ತು ಮಲಿಕ್ ಜಫರ್‌ಗೆ ಆಗಸ್ಟ್ 3ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ.
ಜೆಯುಡಿ (ಜಮಾತ್–ಉದ್–ದವಾ) ಕಾನೂನುಬಾಹಿರವಾಗಿ ನಮ್ಮ ನೆಲದಲ್ಲಿ ತುಂಡು ಭೂಮಿಯನ್ನೂಬಳಸಿಲ್ಲ. ಹಾಗಾಗಿ ಜಾಮೀನು
ನೀಡುವಂತೆ ವಿಚಾರಣೆ ವೇಳೆಸಯೀದ್ ಪರ ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದರು.
ಜೆಯುಡಿ ವ್ಯಾಪ್ತಿಯಲ್ಲಿ 300 ಸಂಸ್ಥೆಗಳು, ಶಾಲೆ, ಆಸ್ಪತ್ರೆ, ಆಂಬುಲೆನ್ಸ್ ಸೇವೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.