2022 ವಿಶ್ವದ ಬಹುತೇಕ ದೇಶಗಳು ಆಂತರಿಕ ಕ್ಷೋಭೆ, ಯುದ್ಧಗಳಿಗೆ ಸಾಕ್ಷಿಯಾದ ವರ್ಷ. ಫೆಬ್ರುವರಿಯಲ್ಲಿ ಆರಂಭವಾದರಷ್ಯಾ–ಉಕ್ರೇನ್ ಯುದ್ಧ ಇನ್ನೂ ಮುಗಿದಿಲ್ಲ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಬಗೆಹರಿದಿಲ್ಲ. ಪಾಕಿಸ್ತಾನ ಪ್ರವಾಹ, ಅಮೆರಿಕದ ಹಿಮಮಾರುತ, ಇಂಡೊನೇಷ್ಯಾದ ಕಾಲ್ತುಳಿತ... ಹೀಗೆ ಪ್ರಕೃತಿ ವಿಕೋಪಗಳು ಮತ್ತು ದುರಂತಗಳ ಸಾಲು ಪಟ್ಟಿ ಮಾಡಿದರೆ ಮುಗಿಯುವುದಿಲ್ಲ
***
ಜನವರಿ
3-ಪ್ರಜಾಪ್ರಭುತ್ವ ಪರ ಪ್ರತಿಭಟನೆಯಿಂದಾಗಿ ಸುಡಾನ್ ಪ್ರಧಾನಿ ಅಬ್ದುಲ್ಲಾ ಹ್ಯಾಮ್‌ಡೋಕ್ ರಾಜೀನಾಮೆ.
9-ಕಜಕಸ್ತಾನದಲ್ಲಿ ಹಿಂಸಾತ್ಮಕ ಪ್ರತಿಭಟನೆ. 5,800 ಮಂದಿ ಬಂಧನ.
21-ಯೆಮೆನ್‌ನ ಹೌತಿ ಬಂಡುಕೋರರಿಂದ ಜೈಲಿನ ಮೇಲೆ ವೈಮಾನಿಕ ದಾಳಿ: 100ಕ್ಕೂ ಹೆಚ್ಚು ಕೈದಿಗಳ ಮರಣ.
24-ಬುರ್ಕಿನಾ ಫಾಸೊ ದೇಶದ ಸೈನಿಕರಿಂದ ಬಂಡಾಯ. ಅಧ್ಯಕ್ಷ ರೋಚ್ ಮಾರ್ಕ್ ಕ್ರಿಸ್ಟಿಯನ್ ಕಾಬೋರ್ ಬಂಧನ.
29-ಭಾರತವು ಇಸ್ರೇಲ್‌ನಿಂದ ಪೆಗಾಸಸ್ ಬೇಹುಗಾರಿಕೆ ಕುತಂತ್ರಾಂಶ ಖರೀದಿಸಿರುವುದಾಗಿ ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ.
ಫೆಬ್ರುವರಿ
3-ಪೆಗಾಸಸ್ ಕುತಂತ್ರಾಂಶ ಖರೀದಿ ದೃಢಪಡಿಸಿದ ಅಮೆರಿಕದ ಎಫ್‌ಬಿಐ.
22- ಉಕ್ರೇನ್‌ನ ಡೊನೆಸ್ಕ್, ಲುಹಾನ್ಸ್ಕ್‌ನಲ್ಲಿ ರಷ್ಯಾ ಸೇನೆ ಜಮಾವಣೆ.
23- ಉಕ್ರೇನ್‌ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ.
24- ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ. ಬಂಕರ್, ಸೇನಾ ನೆಲೆಗಳು ಧ್ವಂಸ. ಅಪಾರ ಸಾವು.
27- ರಷ್ಯಾಗೆ ನೀಡಿರುವ ಭದ್ರತಾ ಮಂಡಳಿ ಕಾಯಂ ಸದಸ್ಯತ್ವ ರದ್ಧತಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮನವಿ.
ಮಾರ್ಚ್
1–ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಉಕ್ರೇನ್‌ನ ಹಾರ್ಕಿವ್ ನಗರದಲ್ಲಿ ನೆಲೆಸಿದ್ದ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಸಾವು.
2-ಯುದ್ಧ ಬಿಕ್ಕಟ್ಟು ಮತ್ತಷ್ಟು ಜಟಿಲ. ಉಕ್ರೇನ್ ತೊರೆಯುವಂತೆ ಭಾರತೀಯ ನಾಗರಿಕರಿಗೆ ರಾಯಭಾರ ಕಚೇರಿಯ ಸೂಚನೆ.
4-ಉಕ್ರೇನ್‌ನ ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ದಾಳಿ.
15- ಕೀವ್‌ಗೆ ಭೇಟಿ ನೀಡಲು ನ್ಯಾಟೊ ಸದಸ್ಯ ರಾಷ್ಟ್ರಗಳ ಪ್ರಧಾನಿಗಳ ನಿರ್ಧಾರ.
17- ಸಾವಿರಕ್ಕೂ ಅಧಿಕ ಜನರಿದ್ದ ಥಿಯೇಟರ್ ಮೇಲೆ ರಷ್ಯಾ ಪಡೆಗಳಿಂದ ಬಾಂಬ್ ದಾಳಿ. ನೂರಾರು ಮಂದಿ ಸಾವು.
18- ಉಕ್ರೇನ್‌ನ ಲುವಿವ್ ನಗರದ ಯುದ್ಧ ವಿಮಾನ ದುರಸ್ಥಿ ಘಟಕದ ಮೇಲೆ ಸರಣಿ ದಾಳಿ.
20- ರಷ್ಯಾದಿಂದ ವೃದ್ಧಾಶ್ರಮದ ಮೇಲೆ ಗುಂಡಿನ ದಾಳಿ. 56 ಮಂದಿ ಸಾವು.
ಏಪ್ರಿಲ್
5- ಪಾಕಿಸ್ತಾನದಲ್ಲಿ ಸಾಂವಿಧಾನಿಕ ಬಿಕ್ಕಟ್ಟು. ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿಲುವಳಿ ತಿರಸ್ಕಾರ.
10- ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರ ಪತನ.
11- ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಹಬಾಜ್ ಷರೀಫ್ ಆಯ್ಕೆ.
19-ಶ್ರೀಲಂಕಾ ಸರ್ಕಾರದ ವಿರುದ್ಧ ಜನಾಕ್ರೋಶ. ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿ.
21- ಉಕ್ರೇನ್‌ನ ಮರಿಯಾಪೋಲ್ ನಗರ ವಶಪಡಿಸಿಕೊಂಡ ರಷ್ಯಾ.
25- ಫ್ರಾನ್ಸ್ ಅಧ್ಯಕ್ಷರಾಗಿ ಎಮಾನ್ಯುಯೆಲ್ ಮ್ಯಾಕ್ರಾನ್ ಸತತ ಎರಡನೇ ಅವಧಿಗೆ ಆಯ್ಕೆ.
ಮೇ
6-ಶ್ರೀಲಂಕಾದಲ್ಲಿ ಹದಗೆಟ್ಟ ಆರ್ಥಿಕತೆ. ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರ. ಕಾನೂನು ಸುವ್ಯವಸ್ಥೆ ಕಾಪಾಡಲು ಸೇನೆಗೆ ಸಂಪೂರ್ಣ ಅಧಿಕಾರ.
8-ರಷ್ಯಾ ತೈಲ ಆಮದು ಮೇಲೆ ಜಿ-7 ಒಕ್ಕೂಟದಿಂದ ನಿರ್ಬಂಧ.
9- ಶ್ರೀಲಂಕಾದಲ್ಲಿ ಹಿಂಸಾಚಾರ. ಸಂಸದ ಅಮರಕೀರ್ತಿ ಅಥುಕೊರಾಲಹತ್ಯೆ.ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸ ರಾಜೀನಾಮೆ. ಸಂಪುಟ ವಿಸರ್ಜನೆ.
10- ಶ್ರೀಲಂಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮುಂದುವರಿಕೆ. ರಕ್ಷಣೆಗಾಗಿ ಮಹಿಂದಾ ರಾಜಪಕ್ಸ ಕುಟುಂಬ ನೌಕಾ ನೆಲೆಗೆ ಪಲಾಯನ.
*ಉಕ್ರೇನ್ ಮೇಲೆ ಸಮರ ಮುಂದುವರಿಸಿದ ರಷ್ಯಾ. ಹೈಪರ್‌ಸಾನಿಕ್ ಕ್ಷಿಪಣಿ ಹಾರಿಸಿ ಒಡೆಸಾ ಬಂದರು ಧ್ವಂಸ.
12- ಶ್ರೀಲಂಕಾ ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ.
13- ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೇದ್ ಅಲ್ ನಹ್ಯಾನ್ ನಿಧನ.
14-ಯುಎಇ ಹೊಸ ಅಧ್ಯಕ್ಷರಾಗಿ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಆಯ್ಕೆ.
ಜುಲೈ
1- ಇಸ್ರೇಲ್ ಸಂಸತ್ತು ವಿಸರ್ಜನೆ.
5- ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್ ರಾಜೀನಾಮೆ.
6- ಕನ್ಸರ್ವೇಟಿವ್ ಪಕ್ಷದ ಟೋರಿ ನಾಯಕತ್ವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ.
8- ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ. ಪಶ್ಚಿಮ ಜಪಾನ್‌ನನಾರಾ ಪಟ್ಟಣದಲ್ಲಿ ಭಾಷಣ ಮಾಡುತ್ತಿದ್ದಾಗ ಹಂತಕನ ಗುಂಡಿಗೆ ಬಲಿ.
9- ಶ್ರೀಲಂಕಾದಲ್ಲಿ ನಾಗರಿಕ ದಂಗೆ. ಅಧ್ಯಕ್ಷ ಗೊಟಬಯ ರಾಜಪಕ್ಸ ನಿವಾಸಕ್ಕೆ ತೆರಳಿ ದಾಂಧಲೆ.
10- ಗೊಟಬಯ ರಾಜಪಕ್ಸ ಅಜ್ಞಾತ ಸ್ಥಳಕ್ಕೆ ಪಲಾಯನ.
13- ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿ. ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಹಂಗಾಮಿ ಅಧ್ಯಕ್ಷ.
14- ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ.
20- ಶ್ರೀಲಂಕಾ ಅಧ್ಯಕ್ಷರಾಗಿ ರಾನಿಲ್ ವಿಕ್ರಮ ಸಿಂಘೆ ಆಯ್ಕೆ.
30-ಫಿಲಿಪ್ಪೀನ್ಸ್‌ನಮಾಜಿ ಅಧ್ಯಕ್ಷ ಫಿಡೆಲ್ ರಾಮೋಸ್ ನಿಧನ.
ಆಗಸ್ಟ್
2-ಅಮೆರಿಕದಿಂದ ಅಲ್ ಕೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ ಹತ್ಯೆ.
12- ಲೇಖಕ ಸಲ್ಮಾನ್ ರಶ್ದಿ ಹತ್ಯೆ ಯತ್ನ.
27- ಪಾಕಿಸ್ತಾನದಲ್ಲಿ ಭಾರಿ ಮಳೆ. ಪ್ರವಾಹಕ್ಕೆ ಸಿಲುಕಿ 937 ಸಾವು.
31- ರಷ್ಯಾ ಸಂಯುಕ್ತ ಸಂಸ್ಥಾನದ ಕೊನೆಯ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ ನಿಧನ
ಸೆಪ್ಟೆಂಬರ್
5-ಬ್ರಿಟನ್ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ. ಈ ಗಾದಿಗೇರಿದ 3ನೇ ಮಹಿಳೆ.
8- ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನ.
10- ಬ್ರಿಟನ್ ರಾಜನಾಗಿ3ನೇ ಚಾರ್ಲ್ಸ್ ಅಧಿಕಾರ ಸ್ವೀಕಾರ.
19- ರಾಣಿ 2ನೇ ಎಲಿಜಬೆತ್ ಅಂತ್ಯಕ್ರಿಯೆ. 2 ಸಾವಿರ ಗಣ್ಯರು ಭಾಗಿ.
* ಹಿಜಾಬ್ ಧರಿಸದ್ದಕ್ಕಾಗಿ ನೈತಿಕ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ 22 ವರ್ಷದ ಯುವತಿ ಸಾವು. ಇರಾನ್‌ನಲ್ಲಿ ತೀವ್ರ ಪ್ರತಿಭಟನೆ.
25- ಉಕ್ರೇನ್ ವಿರುದ್ಧದ ಯುದ್ಧ. ಪುಟಿನ್ ನಿರ್ಧಾರ ವಿರೋಧಿಸಿ ರಷ್ಯಾದಲ್ಲಿ ಪ್ರತಿಭಟನೆ.
27- ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಅಂತ್ಯಸಂಸ್ಕಾರ. ಪ್ರಧಾನಿ ಮೋದಿ ಭಾಗಿ.
28- ಸೌದಿ ಅರೇಬಿಯಾದ ನೂತನ ಪ್ರಧಾನಿಯಾಗಿ ಯುವರಾಜಮೊಹಮ್ಮದ್ ಬಿನ್ ಸಲ್ಮಾನ್ ನೇಮಕ.
ಅಕ್ಟೋಬರ್
1- ಫುಟ್‌ಬಾಲ್ ಪಂದ್ಯದ ವೇಳೆ ಗಲಭೆ. ಇಂಡೊನೇಷ್ಯಾದಲ್ಲಿ ಕಾಲ್ತುಳಿತಕ್ಕೆ 125 ಮಂದಿ ಸಾವು.
5- ಫ್ರಾನ್ಸ್‌ನ ಲೇಖಕಿ ಆ್ಯನಿ ಎನ್ಸೋಗೆ ನೊಬೆಲ್ ಗೌರವ.
10- ಅರ್ಥಶಾಸ್ತ್ರಜ್ಞರಾದ ಬೆನ್ ಎಸ್ ಬೆರ್ನಾನ್ಕೆ, ಡಗ್ಲಾಸ್ ಡಬ್ಲ್ಯು ಡೈಮಂಡ್ ಮತ್ತು ಫಿಲಿಪ್ ಎಚ್ ಡೈಬ್‌ವಿಗ್‌ಗೆ ನೊಬೆಲ್ ಗರಿ.
20- ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ.
22- ಚೀನಾ ಅಧ್ಯಕ್ಷರಾಗಿ ಷಿ ಜಿನ್‌ಪಿಂಗ್ ಪುನರಾಯ್ಕೆ.
24- ಬ್ರಿಟನ್ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಕ್ ನೇಮಕ.
ನವೆಂಬರ್
3-ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ದಾಳಿ. ಕಾಲಿಗೆ ತಗುಲಿದ ಗುಂಡು.
16- ಭಾರತಕ್ಕೆ ಜಿ-20 ಗುಂಪಿನ ಅಧ್ಯಕ್ಷತೆ ಹಸ್ತಾಂತರ.
21-ಇಂಡೊನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ- 162 ಮಂದಿ ಸಾವು. 700ಕ್ಕೂ ಅಧಿಕ ಜನರಿಗೆ ಗಾಯ.
27- ಶೂನ್ಯ ಕೋವಿಡ್ ನೀತಿ ವಿರುದ್ಧ ಚೀನಾದಲ್ಲಿ ಜನಾಕ್ರೋಶ.
ಡಿಸೆಂಬರ್
1-ಜಿ-20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ಭಾರತ.
4-ಇಂಡೊನೇಷ್ಯಾದ ಜಾವಾ ಅಗ್ನಿಪರ್ವತ ಸೆಮೆರುವಿನಲ್ಲಿ ಜ್ವಾಲಾಮುಖಿ ಸ್ಫೋಟ.
16-ಐರ್ಲೆಂಡ್ ಪ್ರಧಾನಿಯಾಗಿಲಿಯೋ ವಾರಡ್ಕರ್ ನೇಮಕ.
23-ನೇಪಾಳ ಜೈಲಿನಿಂದ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಬಿಡುಗಡೆ.
*‘ಬಾಂಬ್ ಸೈಕ್ಲೋನ್’ ಶೀತ ಮಾರುತಕ್ಕೆ ಅಮೆರಿಕ ತತ್ತರ.
25- ನೇಪಾಳ ಪ್ರಧಾನಿಯಾಗಿ ಪುಷ್ಪ ಕಮಲ್ ದಹಲ್ (ಪ್ರಚಂಡ) ನೇಮಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.