ಟೆಹ್ರಾನ್: ಇಸ್ರೇಲ್‌ನ ಸಂಭಾವ್ಯ ದಾಳಿಗೆ ಪ್ರತ್ಯುತ್ತರ ನೀಡಲು ಇರಾನ್ ಸಜ್ಜಾಗಿದೆ ಎಂದು ಅಲ್ಲಿನ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
'ಇಸ್ರೇಲ್ ನಡೆಸಬಹುದಾದ ದಾಳಿಗೆ ಅಗತ್ಯ ಪ್ರತ್ಯುತ್ತರ ನೀಡಲು ಇರಾನ್ ಸಂಪೂರ್ಣ ಸಜ್ಜಾಗಿದೆ' ಎಂದು ಸೇನೆಯ ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ 'ತಸ್ನಿಮ್' ವರದಿ ಮಾಡಿದೆ.
ಇರಾನ್ ಬೆಂಬಲಿತ ಸಂಘಟನೆಗಳ ನಾಯಕರ ಹತ್ಯೆಗೆ ಪ್ರತೀಕಾರವಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪಸ್ (ಐಆರ್‌ಜಿಸಿ) ಸುಮಾರು 200 ಕ್ಷಿಣಿಗಳನ್ನು ಇಸ್ರೇಲ್‌ನತ್ತ ಮಂಗಳವಾರ ಉಡಾಯಿಸಿತ್ತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆ ಇದ್ದು, ಇರಾನ್ ಪ್ರತ್ಯುತ್ತರಕ್ಕೆ ಸಿದ್ಧತೆ ಮಾಡಿಕೊಂಡಿದೆ.
'ಒಂದು ವೇಳೆ ಇಸ್ರೇಲ್ ಕ್ರಮ ಕೈಗೊಂಡರೆ, ಇರಾನ್ ಪ್ರತಿ ದಾಳಿ ನಡೆಸುವುದರಲ್ಲಿ ಯಾವುದೇ ಅನುಮಾವಿಲ್ಲ. ಇಸ್ರೇಲ್‌ನ ಹಲವು ತಾಣಗಳ ಮೇಲೆ ದಾಳಿ ನಡೆಸಲು ಪಟ್ಟಿ ಮಾಡಿಕೊಂಡಿದೆ. ಯಾವುದೇ ಸ್ಥಳವನ್ನು ನೆಲಸಮ ಮಾಡಬಲ್ಲದು' ಎಂದು 'ತಸ್ನಿಮ್' ಉಲ್ಲೇಖಿಸಿದೆ.
ಬೈರೂತ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಐಆರ್‌ಜಿಸಿ ನಾಯಕ ಅಬ್ಬಾಸ್ ನಿಲ್‌ಫೋರುಶಾನ್ ಇತ್ತೀಚೆಗೆ ಹತ್ಯೆಯಾಗಿದ್ದರು. ಇದಾದ ಬಳಿಕ, ಮಂಗಳವಾರ ನಡೆಸಿದ ದಾಳಿಯು ಇಸ್ರೇಲ್ ಮೇಲೆ ಇರಾನ್ ಎರಡನೇ ನೇರ ದಾಳಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.