ಟೆಹರಾನ್: ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗಿನ ಪರಮಾಣು ಒಪ್ಪಂದದಲ್ಲಿ ಇರಾನ್ ಮರು ಸೇರ್ಪಡೆಯಾಗಬೇಕಿದ್ದಲ್ಲಿ ಅಮೆರಿಕವು ಇರಾನ್ ಮೇಲೆ ಹೇರಿರುವ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಭಾನುವಾರ ತಿಳಿಸಿದರು.
‘ಇರಾನ್ ಮತ್ತೆ ಒಪ್ಪಂದಕ್ಕೆ ಸೇರ್ಪಡೆಯಾಗಲು ಸಿದ್ಧವಿದೆ. ಆದರೆ, ನಮ್ಮದೇ ಆದ ಕೆಲವು ಷರತ್ತುಗಳಿವೆ’ ಎಂದು ಹೇಳಿದ್ದಾರೆ.
‘ಇರಾನ್ ಮತ್ತೆ ಪರಮಾಣು ಒಪ್ಪಂದಕ್ಕೆ ಸೇರ್ಪಡೆಯಾಗ ಬೇಕಿದ್ದರೆ, ಅಮೆರಿಕವು ಇರಾನ್ ಮೇಲೆ ಹೇರಿರುವ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಈ ಬಗ್ಗೆ ನಾವು ಪರಿಶೀಲಿಸುತ್ತೇವೆ. ಒಂದು ವೇಳೆ ಅಮೆರಿಕವು ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿಲ್ಲ ನಾವು ಪರಮಾಣು ಒಪ್ಪಂದಕ್ಕೆ ಮರು ಸೇರ್ಪಡೆಯಾಗುತ್ತೇವೆ’ ಎಂದು ಖಮೇನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.