ಟೆಹರಾನ್: ಇರಾನ್‌ನಲ್ಲಿ ಆ್ಯಪಲ್ ಕಂಪನಿಯ ಐಫೋನ್ ಸರಣಿಯ ಮೊಬೈಲ್‌ಗಳ ಮಾರಾಟ ಮತ್ತು ಬಳಕೆಗೆ ವಿಧಿಸಿದ್ದ ನಿಷೇಧವನ್ನು ಅಲ್ಲಿನ ಸರ್ಕಾರ ವಾಪಸ್ ಪಡೆದಿದೆ.
ದೂರಸಂಪರ್ಕ ಸಚಿವಾಲಯವು ಈ ಬಗ್ಗೆ ಬುಧವಾರ ಪ್ರಕಟಣೆ ಹೊರಡಿಸಿದ್ದು, ಐಫೋನ್ 14, 15 ಮತ್ತು 16 ಸರಣಿಯ ಮೊಬೈಲ್‌ಗಳನ್ನು ಅಧಿಕೃತವಾಗಿ ಮಾರಾಟ ಮಾಡಲು ಅನುಮತಿ ನೀಡಿರುವುದಾಗಿ ತಿಳಿಸಿದೆ.
‘ಇರಾನ್‌ನ ಮಾರುಕಟ್ಟೆಯಲ್ಲಿ ಐಫೋನ್ ಕಂಪನಿಯ ನೂತನ ಮಾದರಿಯ ಮೊಬೈಲ್‌ಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಈ ನಮ್ಮ ಪ್ರಯತ್ನವನ್ನು ಇರಾನ್‌ನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಬೆಂಬಲಿಸಿದ್ದಾರೆ’ ಎಂದು ದೂರಸಂಪರ್ಕ ಸಚಿವ ಸತಾರ್ ಹಮೇಶಿ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಆ್ಯಪಲ್ ಕಂಪನಿಯ ಹೊಸ ಮಾದರಿ ಮೊಬೈಲ್‌ಗಳ ಮಾರಾಟ ಮತ್ತು ಬಳಕೆಗೆ ಇರಾನ್ 2023ರಲ್ಲಿ ನಿಷೇಧ ಹೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.