ದುಬೈ: ಇರಾನ್ ನೌಕಾಪಡೆಯು ಕೆಂಪು ಸಮುದ್ರದಲ್ಲಿ ತನ್ನ ವಾಣಿಜ್ಯ ಹಡಗುಗಳಿಗೆ ಬೆಂಗಾವಲಾಗಿ ನಿಂತಿದೆ ಎಂದು ನೌಕಾಪಡೆಯ ಕಮಾಂಡರ್ ಶಹರಮ್ ಇರಾನಿ ಬುಧವಾರ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.
ಇಸ್ರೇಲ್ ದಾಳಿಯನ್ನು ಇರಾನ್ ಎದುರಿಸಲು ಸಜ್ಜಾಗಿದ್ದು, ಯುದ್ಧ ಸಾಧ್ಯತೆ ಕುರಿತು ಚರ್ಚಿಸಲು ಇಸ್ರೇಲ್‌ನ ಸಚಿವ ಸಂಪುಟವು ಬುಧವಾರ ಸಭೆ ಸೇರಿತ್ತು.
‘ನೌಕಾಪಡೆಯು ಕೆಂಪು ಸಮುದ್ರದಲ್ಲಿ ಇರಾನ್ ವಾಣಿಜ್ಯ ಹಡಗುಗಳಿಗೆ ಬೆಂಗಾವಲಾಗಿ ನಿಂತಿದೆ ಮತ್ತು ಈ ದೃಷ್ಟಿಯಲ್ಲಿ ನಮ್ಮ ಜಮರನ್ ಯುದ್ಧನೌಕೆಯು ಏಡನ್ ಕೊಲ್ಲಿಯಲ್ಲಿ ಇದೆ. ಇತರ ದೇಶದ ಹಡಗುಗಳನ್ನು ರಕ್ಷಿಸಲು ಟೆಹ್ರಾನ್ ಸನ್ನದ್ಧವಾಗಿದೆ’ ಎಂದು ಇರಾನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.