ADVERTISEMENT

ಸುಲೇಮಾನಿ ಹತ್ಯೆಗೆ ಆದೇಶಿಸಿದ ಅಮೆರಿಕ ಪಡೆಗಳು ಭಯೋತ್ಪಾದಕರು: ಇರಾನ್‌ ಘೋಷಣೆ

ಇರಾನ್ ಸಂಸತ್‌ನಲ್ಲಿ ಮಸೂದೆಗೆ ಅನುಮೋದನೆ

ಏಜೆನ್ಸೀಸ್
Published 7 ಜನವರಿ 2020, 13:41 IST
Last Updated 7 ಜನವರಿ 2020, 13:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೆಹರಾನ್‌:ಅಮೆರಿಕದ ಎಲ್ಲಾ ಪಡೆಗಳನ್ನು ‘ಭಯೋತ್ಪಾದಕರು’ ಎಂದು ಘೋಷಿಸಿ ಮಸೂದೆಯೊಂದನ್ನು ಇರಾನ್‌ ಸಂಸತ್‌ನಲ್ಲಿ ಮಂಗಳವಾರ ಮಂಡಿಸಲಾಗಿದ್ದು, ಅನುಮೋದನೆ ದೊರೆತಿದೆ.

ಈ ಮಸೂದೆ ಅಡಿಯಲ್ಲಿ ಅಮೆರಿಕದ ಎಲ್ಲಾ ಪಡೆಗಳು, ರಕ್ಷಣಾ ಸಚಿವಾಲಯ ಮತ್ತು ಅದರ ಅಂಗಸಂಸ್ಥೆಗಳು, ಕಮಾಂಡರ್‌ಗಳು ಹಾಗೂ ಸುಲೇಮಾನಿ ಹತ್ಯೆಗೆ ಆದೇಶಿಸಿದವರನ್ನು ಭಯೋತ್ಪಾದಕರು ಎಂದು ಪರಿಗಣಿಸಲಾಗಿದೆ.

‘ಈ ಪಡೆಗಳಿಗೆಸೇನೆ, ಗುಪ್ತಚರ, ಹಣಕಾಸು, ತಾಂತ್ರಿಕ ಸೇವೆ ಸೇರಿದಂತೆ ಯಾವುದೇ ಸಹಾಯ ಮಾಡುವವರನ್ನು ಭಯೋತ್ಪಾದಕ ಕಾಯ್ದೆ ಅಡಿಯಲ್ಲಿ ಪರಿಗಣಿಸಲಾಗುವುದು’ ಎಂದು ಸಂಸತ್‌ ತಿಳಿಸಿದೆ.

ರೆವಲ್ಯೂಷನರಿ ಗಾರ್ಡ್ಸ್‌ ಅನ್ನು ಭಯೋತ್ಫಾದಕ ಸಂಘಟನೆ ಎಂದು ಅಮೆರಿಕ ಘೋಷಿಸಿ ಕಪ್ಪು ಪಟ್ಟಿಗೆ ಸೇರಿಸಿದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇರಾನ್‌ನ ಉನ್ನತ ಮಟ್ಟದ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.