ADVERTISEMENT

Israel-Iran War: ಇಸ್ರೇಲ್‌ಗೆ ಥಾಡ್ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆ –ಪೆಂಟಗನ್

ಏಜೆನ್ಸೀಸ್
Published 13 ಅಕ್ಟೋಬರ್ 2024, 16:29 IST
Last Updated 13 ಅಕ್ಟೋಬರ್ 2024, 16:29 IST
<div class="paragraphs"><p>ಇಸ್ರೇಲ್ ಮೇಲೆ ಇರಾನ್ ದಾಳಿ</p></div>

ಇಸ್ರೇಲ್ ಮೇಲೆ ಇರಾನ್ ದಾಳಿ

   

ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ಟರ್ಮಿನಲ್‌ ಹೈ ಆಲ್ಟಿಟ್ಯೂಡ್‌ ಏರಿಯಾ ರಕ್ಷಣಾ ತಂತ್ರಜ್ಞಾನದ (ಥಾಡ್) ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಯನ್ನು ಹಾಗೂ ಯೋಧರನ್ನು ಇಸ್ರೇಲ್‌ಗೆ ನಿಯೋಜಿಸಲಾಗುವುದು ಎಂದು ಅಮೆರಿಕದ ಸೇನೆಯ ಪ್ರಧಾನ ಕಚೇರಿ 'ಪೆಂಟಗನ್‌' ಭಾನುವಾರ ಹೇಳಿದೆ.

ADVERTISEMENT

ಇರಾನ್‌ ನಡೆಸಿದ ಭಾರಿ ಪ್ರಮಾಣದ ಕ್ಷಿಪಣಿ ದಾಳಿಯ ಬಳಿಕ ಇಸ್ರೇಲ್‌ ವಾಯುಪಡೆಗೆ ನೆರವಾಗಲು ಥಾಡ್ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಯನ್ನು ಹಾಗೂ ಸೇನಾ ಸಿಬ್ಬಂದಿಯನ್ನು ನೀಯೋಜಿಸಲು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್‌ ಅನುಮೋದನೆ ನೀಡಿದ್ದಾರೆ. ಅಧ್ಯಕ್ಷ ಜೋ ಬೈಡನ್‌ ಅವರ ನಿರ್ದೇಶನದಂತೆ ತೀರ್ಮಾನ ಕೈಗೊಂಡಿದ್ದಾರೆ ಎಂದು ಪೆಂಟಗನ್‌ ಹೇಳಿಕೆ ಬಿಡುಗಡೆ ಮಾಡಿದೆ.

ನೆತನ್ಯಾಹು ವಿಷಾದ
ಲೆಬನಾನ್‌ನಲ್ಲಿ ನಿಯೋಜನೆಗೊಂಡಿರುವ ವಿಶ್ವಸಂಸ್ಥೆಯ ಮಧ್ಯಂತರ ಸೇನಾಪಡೆ (ಯುಎನ್‌ಐಎಫ್‌ಐಎಲ್‌) ಸಿಬ್ಬಂದಿಗೆ ಯಾವುದೇ ರೀತಿಯ ತೊಂದರೆಯಾಗಿದ್ದರೆ ವಿಷಾದಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರಿಗೆ ಹೇಳಿದ್ದಾರೆ.

'ಯುಎನ್‌ಐಎಫ್‌ಐಎಲ್‌ ಸಿಬ್ಬಂದಿ ಸಾವು–ನೋವು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮತ್ತು ಯುದ್ಧ ಗೆಲ್ಲಲು ಏನೆಲ್ಲ ಮಾಡಬೇಕೋ ಅದನ್ನು ಇಸ್ರೇಲ್‌ ಮಾಡಲಿದೆ' ಎಂದು ನೆತನ್ಯಾಹು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.