ಟೆಹ್ರಾನ್: ಇಸ್ರೇಲ್ ಮೇಲೆ ಹಮಾಸ್ ಕಳೆದ ವರ್ಷ ನಡೆಸಿದ ದಾಳಿಯನ್ನು ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಸಮರ್ಥಿಸಿಕೊಂಡಿದ್ದಾರೆ. ದಾಳಿಯು 'ತಾರ್ಕಿಕ ಮತ್ತು ಕಾನೂನಾತ್ಮಕ' ಎಂದು ಹೇಳಿದ್ದಾರೆ.
ಟೆಹ್ರಾನ್‌ನಲ್ಲಿ ಶುಕ್ರವಾರದ ಪಾರ್ಥನೆಯ ನೇತೃತ್ವ ವಹಿಸಿದ ಖಮೇನಿ, 'ಕಳೆದ ವರ್ಷ ಇದೇ ಸಮಯದಲ್ಲಿ ನಡೆದ ದಾಳಿಯು ತಾರ್ಕಿಕ ಹಾಗೂ ಆಂತರರಾಷ್ಟ್ರೀಯ ಕಾನೂನು ಕ್ರಮವಾಗಿತ್ತು. ಪ್ಯಾಲೆಸ್ಟೀನಿಯರ ನಿರ್ಧಾರ ಸರಿಯಾಗಿತ್ತು' ಎಂದಿದ್ದಾರೆ.
ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ದಾಳಿ ನಡೆಸಿದ್ದರು. ಈ ವೇಳೆ 1,200 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ಗಾಜಾ ಮೇಲೆ ದಾಳಿ ನಡೆಸುತ್ತಿದೆ.
ಸಂಘರ್ಷದಿಂದಾಗಿ ಇದುವರೆಗೆ 41,788 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಹಮಾಸ್ ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.