ADVERTISEMENT

ವಿಶ್ವಸಂಸ್ಥೆಯ ಶಾಂತಿ ನಿರ್ಣಯಕ್ಕೆ ಪಾಕ್‌ ಬೆಂಬಲ: ಭಾರತ ಟೀಕೆ

ಪಿಟಿಐ
Published 22 ಜನವರಿ 2021, 10:32 IST
Last Updated 22 ಜನವರಿ 2021, 10:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಅಲ್ಪಸಂಖ್ಯಾತರ ದೇವಾಲಯಗಳನ್ನು ನೆಲಸಮಗೊಳಿಸುವುದಕ್ಕೆ ಕುಮ್ಮಕ್ಕು ನೀಡುತ್ತಿರುವ ದೇಶವು ವಿಶ್ವಸಂಸ್ಥೆಯ ‘ಸಾಂಸ್ಕೃತಿಕ ಶಾಂತಿ’ ನಿರ್ಣಯವನ್ನು ಸಹ-ಪ್ರಾಯೋಜಿಸಿರುವುದು ನಿಜಕ್ಕೂ ಹಾಸ್ಯಸ್ಪದ ಎಂದು ಭಾರತವು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದೆ.

ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ತೆರಿ ಗ್ರಾಮದಲ್ಲಿದ್ದ ಹಿಂದೂ ದೇವಾಲಯವನ್ನು ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ ಬೆಂಬಲಿಗರು ಧ್ವಂಸಗೊಳಿಸಿದ್ದರು. ಇದಕ್ಕೆ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು.

‘ಪಾಕಿಸ್ತಾನದಲ್ಲಿ ಇಂತಹ ಪರಿಸ್ಥಿತಿದೆ. ಆದರೂ ಪಾಕಿಸ್ತಾನವು ವಿಶ್ವಸಂಸ್ಥೆಯ ಶಾಂತಿ ನಿರ್ಣಯಕ್ಕೆ ಅನುಮೋದಿಸಿದೆ. ಇದು ನಿಜಕ್ಕೂ ಹಾಸ್ಯಾಸ್ಪದ. ಈ ಮೂಲಕ ಪಾಕಿಸ್ತಾನವು ನಿರ್ಣಯದ ಹಿಂದೆ ಅಡಗಲು ಪ್ರಯತ್ನಿಸುತ್ತಿದೆ. ಧಾರ್ಮಿಕ ಸ್ಥಳಗಳನ್ನು ಸಂರಕ್ಷಿಸುವ ಸಲುವಾಗಿ ಈ ನಿರ್ಣಯವನ್ನು ವಿಶ್ವಸಂಸ್ಥೆ ಅಂಗೀಕರಿಸಿದೆ’ ಎಂದು ಭಾರತ ಹೇಳಿದೆ.

ADVERTISEMENT

ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸುವುದು, ಹಾನಿಗೊಳಿಸುವುದು ಸೇರಿದಂತೆ ಇತರೆ ಬೆದರಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಗುರುವಾರ ಸಾಂಸ್ಕೃತಿಕ ಶಾಂತಿಎಂಬ ನಿರ್ಣಯವನ್ನು ಅಂಗೀಕರಿಸಿತ್ತು.

ಈ ನಿರ್ಣಯವನ್ನು ಪಾಕಿಸ್ತಾನ ಸೇರಿದಂತೆ ಇತರೆ 21 ರಾಷ್ಟ್ರಗಳು ಸಹ–‍‍ಪ್ರಾಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.