ವಿಶ್ವಸಂಸ್ಥೆ: ಭಯೋತ್ಪಾದಕ ಸಂಘಟನೆಯಾದ ಐಎಸ್‌ಐಎಲ್–ಕೆ (ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆ್ಯಂಡ್ ದಿ ಲೇವಂತ್ – ಖೊರಾಸಾನ್) ಭಾರತದಲ್ಲಿ ಇರುವ ತನ್ನ ಬೆಂಬಲಿಗರ ನೆರವಿನಿಂದ, ಒಬ್ಬಂಟಿಯಾಗಿ ಕೆಲಸ ಮಾಡುವವರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
ದೇಶದಲ್ಲಿ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಲು ಈ ಭಯೋತ್ಪಾದಕ ಸಂಘಟನೆಗೆ ಸಾಧ್ಯವಾಗದೆ ಇದ್ದರೂ, ಅದು ಈ ಮಾರ್ಗ ಅನುಸರಿಸಲು ಮುಂದಾಗಿದೆ ಎಂದು ವರದಿಯು ಎಚ್ಚರಿಸಿದೆ.
‘ಸಂಘಟನೆಯು ಉರ್ದು ಭಾಷೆಯಲ್ಲಿ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದ್ದು, ಹಿಂದೂ–ಮುಸ್ಲಿಂ ಭಿನ್ನಮತವನ್ನು ಭಾರಿ ದೊಡ್ಡದಾಗಿ ತೋರಿಸುವ ಕೆಲಸ ಮಾಡಿದೆ’ ಎಂದು ವಿಶ್ವಸಂಸ್ಥೆಯ ವರದಿಯು ಹೇಳಿದೆ. ಈ ಪ್ರದೇಶದಲ್ಲಿ ಐಎಸ್‌ಐಎಲ್–ಕೆ ಸಂಘಟನೆಯು ಬಹಳ ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.