ಬೈರೂತ್: ಇಸ್ಲಾಮಿಕ್ ಸ್ಟೇಟ್ ಉಗ್ರರು ಸಿರಿಯಾದ ರಖಾ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಹಿಂಸಾತ್ಮಕ ದಾಳಿ ನಡೆಸಿದ್ದಾರೆಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ರಾತ್ರೋರಾತ್ರಿ ಬಂದೂಕು, ಗ್ರೆನೇಡ್ ಮತ್ತು ಸ್ಫೋಟಕಗಳನ್ನು ಸಿಡಿಸಿ ಈ ದಾಳಿ ನಡೆಸಲಾಗಿದೆ. ಉಗ್ರರು ಮತ್ತುಕುರ್ದಿಶ್ ನೇತೃತ್ವದ ಸಿರಿಯಾ ಡೆಮಾಕ್ರೆಟಿಕ್ ಪಡೆ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಕದನ ನಡೆಯಿತು. ಯಾವುದೇ ಸಾವುನೋವು ಸಂಭವಿಸಿರುವ ವರದಿ ಆಗಿಲ್ಲ.
ಈ ದಾಳಿಯಿಂದ ಕುರ್ದಿಶ್ ಪ್ರದೇಶಗಳಲ್ಲಿ ಜಿಹಾದಿಗಳ ಹಾವಳಿ ಹೆಚ್ಚಾಗುವ ಆತಂಕ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.