ಜೆರುಸಲೇಂ: ವೆಸ್ಟ್ ಬ್ಯಾಂಕ್‌ನಲ್ಲಿ ಸ್ಲಾಮಿಕ್ ಜಿಹಾದ್‌ನ ಪ್ರಮುಖ ಕಮಾಂಡರ್ ಸೇರಿ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಶುಕ್ರವಾರ ತಿಳಿಸಿದೆ.
ಉತ್ತರ ನಗರ ತುಲ್ಕರೆಮ್‌ನ ಸಮೀಪದ ನೂರ್ ಶಾಮ್ಸ್ ನಿರಾಶ್ರಿತ ಶಿಬಿರವನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ಗುರುವಾರ ನಡೆಸಿದ ವಾಯುದಾಳಿಯಲ್ಲಿ ಮೊಹಮ್ಮದ್ ಅಬ್ದುಲ್ಲಾನನ್ನು ಸಂಹರಿಸಲಾಗಿದೆ ಎಂದು ಅದು ತಿಳಿಸಿದೆ.
ದಾಳಿಯಲ್ಲಿ ಮತ್ತೊಬ್ಬ ಉಗ್ರಗಾಮಿಯನ್ನೂ ಕೊಲ್ಲಲಾಗಿದ್ದು, ಎಂ-16 ರೈಫಲ್‌ಗಳು ಮತ್ತು ಜಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಬ್ದುಲ್ಲಾ, ಆಗಸ್ಟ್ ಅಂತ್ಯದಲ್ಲಿ ಇಸ್ರೇಲ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಬು ಶುಜಾ ಅಲಿಯಾಸ್ ಮುಹಮ್ಮದ್ ಜಬ್ಬರ್‌ನ ಉತ್ತರಾಧಿಕಾರಿದ್ದ.
ಇಸ್ಲಾಮಿಕ್ ಜಿಹಾದ್, ಹಮಾಸ್‌ನ ಮಿತ್ರ ಪಕ್ಷವಾಗಿದ್ದು, ಎರಡೂ ಗುಂಪುಗಳು ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಪಡೆಗಳ ವಿರುದ್ಧ ಹೋರಾಡುತ್ತಿವೆ.
ಈ ದಾಳಿಯಿಂದಾಗಿ ವೆಸ್ಟ್ ಬ್ಯಾಂಕ್‌ನಲ್ಲಿರುವ ನಮ್ಮ ಸಂಘಟನೆಗಳ ಸಂಕಲ್ಪ ಇನ್ನೂ ಗಟ್ಟಿಯಾಗಿದೆ ಎಂದು ಹಮಾಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.