ಕಾಬೂಲ್: ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಗುರುದ್ವಾರದ ಮೇಲೆ ಶನಿವಾರ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಭಾರತದಲ್ಲಿ ಪ್ರವಾದಿ ಮಹಮ್ಮದ ಬಗ್ಗೆ ಮಾಡಲಾದ ಅವಹೇಳನದ ಪ್ರತಿಕಾರವಾಗಿ ಗುರುದ್ವಾರದ ಮೇಲೆ ದಾಳಿ ಮಾಡಲಾಗಿದೆ ಎಂದು ಐಸಿಎಸ್ ಹೇಳಿದೆ.
ರಾಜಧಾನಿಯಲ್ಲಿರುವ ಸಿಖ್ ಗುರುದ್ವಾರದ ಮೇಲೆ ಶನಿವಾರ ಭಯೋತ್ಪಾದಕರ ದಾಳಿ ನಡೆದಿತ್ತು. ಸ್ಫೋಟ ಮತ್ತು ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು ಅಲ್ಲದೆ ಏಳು ಜನರು ಗಾಯಗೊಂಡಿದ್ದರು. ಈ ಘಟನೆ ವೇಳೆ ಗುರುದ್ವಾರದಲ್ಲಿ ಸುಮಾರು 30 ಮಂದಿ ಇದ್ದಿದ್ದಾಗಿ ವರದಿಯಾಗಿತ್ತು.
ಇದೇ ವೇಳೆ ಗುರುದ್ವಾರಕ್ಕೆ ಒಯ್ಯಲಾಗುತ್ತಿದ್ದ ಸ್ಫೋಟಕಗಳು ತುಂಬಿದ ವಾಹನ ಸ್ಥಳಕ್ಕೆ ತಲುಪದಂತೆ ತಡೆಯುವಲ್ಲಿ ಅಫ್ಗಾನಿಸ್ತಾನದ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದರು. ಇನ್ನು ಗುಂಡಿನ ದಾಳಿಗೆ ಪ್ರತಿಯಾಗಿ ತಾಲಿಬಾನ್ ಸೈನಿಕರು ಪ್ರತಿದಾಳಿ ನಡೆಸಿದ್ದರು. ಇದರಲ್ಲಿ ಮೂವರು ಐಸಿಸ್ ಉಗ್ರರನ್ನು ತಾಲಿಬಾನ್ ಸೈನಿಕರು ಹೊಡೆದುರುಳಿಸಿದ್ದರು.
ಪ್ರವಾದಿ ಮಹಮ್ಮದ್‌ರ ಬಗ್ಗೆ ಅವಹೇಳನ ಮಾಡಿದ್ದಕ್ಕಾಗಿ ಭವಿಷ್ಯದಲ್ಲಿ ಹಿಂದೂ ಹಾಗೂ ಸಿಖ್‌ರ ಮೇಲೆ ಮತ್ತಷ್ಟು ಈ ತರದ ದಾಳಿಗಳನ್ನು ಸಂಘಟಿಸಲಾಗುವುದು ಎಂದು ಐಸಿಸ್ ಹೇಳಿರುವುದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.