ADVERTISEMENT

ಇಸ್ರೇಲ್‌ ಬೇಹುಗಾರಿಕೆ ಸಂಸ್ಥೆ ಪೆಗಾಸಸ್‌ನ ಸಿಇಒ ರಾಜೀನಾಮೆ

ಭಾರತದಲ್ಲೂ ಹಲವು ಗಣ್ಯರ ಮೇಲೆ ಪೆಗಾಸಸ್ ಗೂಢಾಚಾರಿಕೆ ನಡೆಸಿದ ಆರೋಪ

ಏಜೆನ್ಸೀಸ್
Published 22 ಆಗಸ್ಟ್ 2022, 8:39 IST
Last Updated 22 ಆಗಸ್ಟ್ 2022, 8:39 IST
   

ಜೆರುಸಲೇಂ: ಇಸ್ರೇಲ್‌ನ ಎನ್‌ಎಸ್ಒ ಸಮೂಹದ ಪೆಗಾಸಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಒ) ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಎನ್‌ಎಸ್‌ಒ ಖಾಸಗಿ ಕಂಪನಿಯಾಗಿದ್ದು, ಬೇಹುಗಾರಿಕೆಯ ಅಪ್ಲಿಕೇಶನ್‌ಗಳನ್ನು ಮಾರಾಟ ಮಾಡುತ್ತದೆ.

ಕಳೆದ ವರ್ಷದ ಜುಲೈನಲ್ಲಿ ಎನ್‌ಎಸ್‌ಒ ಕಂಪನಿ, ವಿವಿಧ ಸರ್ಕಾರಗಳಿಗೆ ಬೇಹುಗಾರಿಕೆ ಅಪ್ಲಿಕೇಶನ್ ಅನ್ನು ಮಾರಾಟ ಮಾಡುತ್ತಿದೆ ಎಂದು ತನಿಖಾ ವರದಿಯೊಂದು ಹೇಳಿತ್ತು.

ADVERTISEMENT

ಜಾಗತಿಕವಾಗಿ ಮಾನವ ಹಕ್ಕು ಹೋರಾಟಗಾರರು, ರಾಜಕಾರಣಿಗಳು, ಪತ್ರಕರ್ತರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರ ವಿರುದ್ಧ ಸರ್ಕಾರಗಳು ಪೆಗಾಸಸ್ ಅಪ್ಲಿಕೇಶನ್ ಬಳಸಿ ಗೂಡಚಾರಿಕೆ ನಡೆಸುತ್ತಿದೆ ಎಂದು ಆರೋಪಿಸಲಾಗಿತ್ತು.

ಭಾರತದಲ್ಲೂ ಪೆಗಾಸಸ್ ಬಳಸಿ ಬೇಹುಗಾರಿಕೆ ನಡೆಸಿರುವ ಬಗ್ಗೆ ಆರೋಪ ಕೇಳಿಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.