ದಿ ಹೇಗ್: ಗಾಜಾ ಪಟ್ಟಿಯಲ್ಲಿ ನಡೆಸುತ್ತಿರುವ ಸೇನಾ ಆಕ್ರಮಣವನ್ನು ತಕ್ಷಣವೇ ಕೊನೆಗೊಳಿಸಬೇಕೆಂಬ ದಕ್ಷಿಣ ಆಫ್ರಿಕಾದ ಬೇಡಿಕೆ ತಿರಸ್ಕರಿಸುವಂತೆ ಇಸ್ರೇಲ್ ಶುಕ್ರವಾರ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಮನವಿ ಸಲ್ಲಿಸಿದೆ.
ಗಾಜಾದಲ್ಲಿ ಪ್ಯಾಲೆಸ್ಟೀನ್ ಬಂಡುಕೋರರ ಸಂಘಟನೆ ಹಮಾಸ್ ವಿರುದ್ಧ ಇಸ್ರೇಲ್ ‘ಜನಾಂಗೀಯ ಹತ್ಯೆ’ ನಡೆಸುತ್ತಿದೆ ಎಂದು ಆರೋಪಿಸಿರುವ ದಕ್ಷಿಣ ಆಫ್ರಿಕಾ, ತಕ್ಷಣವೇ ಇಸ್ರೇಲ್‌ನ ಸೇನಾ ಕಾರ್ಯಾಚರಣೆ ನಿಲ್ಲಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಈ ಅರ್ಜಿಯ ಎರಡನೇ ದಿನದ ವಿಚಾರಣೆ ಆರಂಭವಾದಾಗ ಇಸ್ರೇಲ್ ವಿದೇಶಾಂಗ ಸಚಿವಾಲಯದ ಕಾನೂನು ಸಲಹೆಗಾರ ಟಾಲ್ ಬೇಕರ್ ಅವರು ದಕ್ಷಿಣ ಆಫ್ರಿಕಾದ ಈ ಅರ್ಜಿಯು ಮಾನಹಾನಿಕಾರವಾದುದು. ಹಾಗಾಗಿ ತಿರಸ್ಕರಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.