ADVERTISEMENT

ಇಸ್ರೇಲ್‌ ಚುನಾವಣೆ: ಪ್ರಧಾನಿ ನೆತನ್ಯಾಹುಗೆ ಹಿನ್ನಡೆ

ಸ್ನೇಹಿತರೀಗ ಪ್ರತಿಸ್ಪರ್ಧಿಗಳು

ಪಿಟಿಐ
Published 19 ಸೆಪ್ಟೆಂಬರ್ 2019, 9:47 IST
Last Updated 19 ಸೆಪ್ಟೆಂಬರ್ 2019, 9:47 IST
ಬೆಂಜಮಿನ್‌ ನೆತನ್ಯಾಹು
ಬೆಂಜಮಿನ್‌ ನೆತನ್ಯಾಹು   

ಜೆರುಸಲೇಂ: ಇಸ್ರೇಲ್‌ನಲ್ಲಿ ಮಂಗಳವಾರ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್‌ ಪಕ್ಷಕ್ಕೆ ಅಲ್ಪ ಹಿನ್ನಡೆಯಾಗಿದೆ.

ಬುಧವಾರ ನಡೆದ ಮತ ಎಣಿಕೆಯಲ್ಲಿ, ಲಿಕುಡ್‌ ಪಕ್ಷಕ್ಕೆ 31 ಸ್ಥಾನ ಲಭಿಸಿದ್ದರೆ, ಮುಖ್ಯ ಪ್ರತಿಸ್ಪರ್ಧಿ ಪಕ್ಷವಾದ ಬ್ಲ್ಯೂ ಆ್ಯಂಡ್‌ ವೈಟ್‌ 32 ಸ್ಥಾನ ಪಡೆದುಕೊಂಡಿದೆ. ಇದರಿಂದ ದೀರ್ಘ ಅವಧಿಗೆ ದೇಶವನ್ನಾಳಿದ ಹೆಗ್ಗಳಿಕೆ ಹೊಂದಿರುವ ನೆತನ್ಯಾಹು ಅವರ ಬುನಾದಿಯೇ ಅಲುಗಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಶೇ 91ರಷ್ಟು ಮತ ಎಣಿಕೆ ಪೂರ್ಣಗೊಂಡಿದ್ದು, ಲಿಕುಡ್‌ ಪಕ್ಷಕ್ಕಿಂತ ಬ್ಲ್ಯೂ ಆ್ಯಂಡ್‌ ವೈಟ್‌ ಪಕ್ಷ ಮತ ಗಳಿಕೆಯಲ್ಲಿ ಮುಂದಿದೆ’ ಎಂದು ಕೇಂದ್ರೀಯ ಚುನಾವಣಾ ಸಮಿತಿ (ಸಿಇಸಿ) ತಿಳಿಸಿದೆ.

ಇಸ್ರೇಲ್‌ನ ರಾಜಕೀಯದಲ್ಲಿ ನೆತನ್ಯಾಹು, ಇಸ್ರೇಲ್‌ ಬೀಟೆನು ಪಕ್ಷದ ನಾಯಕ ಹಾಗೂ ಮಾಜಿ ರಕ್ಷಣಾ ಸಚಿವ ಅವಿಗ್ಡಾರ್‌ ಲೀಬರ್‌ಮನ್‌ ಅವರದು 31 ವರ್ಷಗಳ ಸ್ನೇಹ. ಈಗ ಲೀಬರ್‌ಮನ್‌ ಅವರೇ ಪ್ರಧಾನಿ ಸ್ಥಾನದ ಪ್ರಬಲ ಆಕಾಂಕ್ಷಿ ಮಾತ್ರವಲ್ಲ, ಪ್ರತಿಸ್ಪರ್ಧಿಯೂ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.