ವಾಷಿಂಗ್ಟನ್: ‘ಕದನ ವಿರಾಮ ಘೋಷಣೆ ಮತ್ತು ಗಾಜಾದಿಂದ ಒತ್ತೆಯಾಳುಗಳ ಬಿಡುಗಡೆ ಕುರಿತ ಪ್ರಸ್ತಾವಕ್ಕೆ ಇಸ್ರೇಲ್ ಒಪ್ಪಿದೆ. ಹಮಾಸ್ ಕೂಡ ಒಪ್ಪಿಕೊಳ್ಳಬೇಕು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಕೇಳಿಕೊಂಡಿದ್ದಾರೆ.
ಇಸ್ರೇಲ್–ಹಮಾಸ್ ಯುದ್ಧ ಆರಂಭವಾದ ಬಳಿಕ ಹತ್ತನೇ ಬಾರಿಗೆ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಿರುವ ಬ್ಲಿಂಕನ್ ಈ ಮಾತು ಹೇಳಿದರು. ಆದರೆ, ಉಲ್ಲೇಖಿತ ಪ್ರಸ್ತಾವ ಹಮಾಸ್‌ನ ಬೇಡಿಕೆ, ಅಭಿಪ್ರಾಯಗಳಿಗೆ ಸ್ಪಂದಿಸಲಿದೆಯೇ ಎನ್ನುವುದನ್ನು ಅವರು ದೃಢಪಡಿಸಿಲ್ಲ.
ಹಮಾಸ್ ಬಂಡುಕೋರರು ಈ ಪ್ರಸ್ತಾವ ಒಪ್ಪಿದರೆ, ಮುಂದಿನ ದಿನಗಳಲ್ಲಿ ಅನುಷ್ಠಾನದ ನಿಟ್ಟಿನಲ್ಲಿ ಮಾತುಕತೆಗಳು ನಡೆಯಲಿವೆ ಎಂದರು.
ಇಸ್ರೇಲ್‌ನ ಜೊತೆ ಮಾತುಕತೆ ನಡೆಸಿದ ನಂತರ ಸಂಧಾನ ಮಾತುಕತೆ ಮುಂದುವರಿಸಲು ಬ್ಲಿಂಕನ್ ಅವರು ಈಜಿಪ್ಟ್ ಮತ್ತು ಕತಾರ್‌ಗೆ ಭೇಟಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.