ADVERTISEMENT

Israel Hamas War | ವೈದ್ಯಕೀಯ, ಮಾನವೀಯ ನೆರವು ನೀಡುವಂತೆ ಹಮಾಸ್ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2023, 2:27 IST
Last Updated 13 ಅಕ್ಟೋಬರ್ 2023, 2:27 IST
<div class="paragraphs"><p>ಹಮಾಸ್‌ ಬಂಡುಕೋರರು ಹಾಗೂ ಇಸ್ರೇಲ್ ಸೇನೆ ನಡುವಿನ ಸಂಘರ್ಷ</p></div>

ಹಮಾಸ್‌ ಬಂಡುಕೋರರು ಹಾಗೂ ಇಸ್ರೇಲ್ ಸೇನೆ ನಡುವಿನ ಸಂಘರ್ಷ

   

–ರಾಯಿಟರ್ಸ್ ಚಿತ್ರ

ಜೆರುಸಲೇಂ: ಹಮಾಸ್‌ ಬಂಡುಕೋರರು ಹಾಗೂ ಇಸ್ರೇಲ್ ಸೇನೆ ನಡುವಿನ ಸಮರದ ಏಳನೇ ದಿನವಾದ ಶುಕ್ರವಾರವೂ ಆಗಸದಲ್ಲಿ ಯುದ್ಧ ವಿಮಾನಗಳ ಗರ್ಜನೆ ಮುಂದುವರಿದಿದೆ.

ADVERTISEMENT

ಈ ಎಲ್ಲಾ ಬೆಳವಣಿಗೆಗಳ ನಡುವೆ ಇಸ್ರೇಲ್‌ ದಾಳಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಗಾಜಾ ಪಟ್ಟಿಗೆ ಅಗತ್ಯ ವೈದ್ಯಕೀಯ ಮತ್ತು ಮಾನವೀಯ ನೆರವು ನೀಡುವಂತೆ ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರು ಅಂತರರಾಷ್ಟ್ರೀಯ ಪರಿಹಾರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಹಮಾಸ್ ಹಿಡಿತದಲ್ಲಿರುವ ಗಾಜಾ ಪಟ್ಟಿಯ ಸುತ್ತ ಮುತ್ತಿಗೆ ಹಾಕಿ, ಸಂಪೂರ್ಣ ದಿಗ್ಬಂಧನ ಹೇರಲು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಇತ್ತೀಚೆಗೆ ಆದೇಶಿಸಿದ್ದರು.

‘ಗಾಜಾ ಪ್ರದೇಶಕ್ಕೆ ವಿದ್ಯುತ್‌, ಆಹಾರ ಮತ್ತು ಇಂಧನ ಪೂರೈಕೆ ನಿಲ್ಲಿಸುತ್ತೇವೆ. ನಾವು ಹೋರಾಡುತ್ತಿರುವುದು ಭಯೋತ್ಪಾದಕರ ವಿರುದ್ಧ, ಅದಕ್ಕೆ ಅನುಗುಣವಾಗಿ ಪ್ರತ್ಯುತ್ತರ ನೀಡುತ್ತೇವೆ’ ಎಂದು ತಿಳಿಸಿದ್ದರು.

ಗಾಜಾ ಪ್ರದೇಶವು ತನ್ನ ಮೂಲಭೂತ ಅಗತ್ಯಗಳಿಗಾಗಿ ಇಸ್ರೇಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇಸ್ರೇಲ್‌ನ ಈ ನಿರ್ಧಾರವು 23 ಲಕ್ಷ ಜನರ ಮೇಲೆ ಪರಿಣಾಮ ಬೀರಿದೆ. ಆಹಾರ ಮತ್ತು ಇಂಧನದ ಕೊರತೆಯಿಂದಾಗಿ ಅಲ್ಲಿನ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗಾಜಾ ಗಡಿಯನ್ನು ಬಹುತೇಕ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಇಸ್ರೇಲ್ ಹೇಳಿದೆ. ಅಲ್ಲದೆ, ಗಾಜಾ ಗಡಿಗೆ ಸನಿಹದ ಪಟ್ಟಣಗಳಲ್ಲಿ 1,500ಕ್ಕೂ ಹೆಚ್ಚು ಹಮಾಸ್‌ ಬಂಡುಕೋರರ ಮೃತದೇಹಗಳು ಪತ್ತೆಯಾಗಿವೆ ಎಂದು ಹೇಳಿಕೊಂಡಿದೆ. ಗಾಜಾ ಗಡಿಗೆ ಹತ್ತಿರದಲ್ಲಿರುವ ಪಟ್ಟಣಗಳಲ್ಲಿರುವ ಜನರನ್ನು ಇಸ್ರೇಲ್ ತೆರವುಗೊಳಿಸುತ್ತಿದೆ.

ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಸಾವನ್ನಪ್ಪಿರುವ ಜನರ ಸಂಖ್ಯೆಯು 900ಕ್ಕಿಂತ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.