ಜೆರುಸಲೇಂ: ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ನಡೆಸಿದ್ದ ದಾಳಿಯಲ್ಲಿ ಸಾವಿಗೀಡಾದದವರ ಸಂಖ್ಯೆಯನ್ನು ಇಸ್ರೇಲ್ ಪರಿಷ್ಕರಿಸಿದೆ. ದಾಳಿಯಲ್ಲಿ 1,200 ಮಂದಿ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಲಿಯರ್ ಹಯಾತ್ ಹೇಳಿದ್ದಾರೆ.
1,400 ಮಂದಿ ಸಾವಿಗೀಡಾಗಿದ್ದಾಗಿ ಈ ಹಿಂದೆ ಇಸ್ರೇಲ್ ಹೇಳಿತ್ತು.
‘ಇದು ಸಾವಿಗೀಡಾದವರ ಹೊಸ ಅಂದಾಜು’ ಎಂದು ಹೇಳಿರುವ ಅವರು, ‘ಇದರಲ್ಲಿ ವಿದೇಶಿ ನೌಕರರು ಹಾಗೂ ವಿದೇಶಿ ಪ್ರಜೆಗಳು ಇದ್ದಾರೆ’ ಎಂದು ತಿಳಿಸಿದ್ದಾರೆ.
‘ಈ ಸಂಖ್ಯೆಯೇ ಅಂತಿಮವಲ್ಲ. ಎಲ್ಲಾ ದೇಹಗಳ ಗುರುತು ಪತ್ತೆಯಾದ ಬಳಿಕ ಇದು ಬದಲಾಗಬಹುದು’ ಎಂದು ಹೇಳಿದ್ದಾರೆ.
ಈ ದಾಳಿಯ ಬಳಿಕ ಹಮಾಸ್ ನಿರ್ನಾಮಕ್ಕೆ ಪಣ ತೊಟ್ಟಿರುವ ಇಸ್ರೇಲ್, ಗಾಜಾ ಪಟ್ಟಿಯಲ್ಲಿ ಸತತವಾಗಿ ದಾಳಿ ನಡೆಸುತ್ತಿದೆ. ಇಸ್ರೇಲ್ ದಾಳಿಯಿಂದಾಗಿ 4 ಸಾವಿರಕ್ಕೂ ಅಧಿಕ ಮಕ್ಕಳು ಸೇರಿ 11 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಗಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.