ಜೆರುಸಲೇಂ: ಇಸ್ರೇಲ್ ಸ್ವಾಧೀನಪಡಿಸಿಕೊಂಡಿರುವ ಗೋಲನ್ ಹೈಟ್ಸ್ ಮೇಲೆ ಲೆಬನಾನ್‌ನ ಬಂಡುಕೋರ ಸಂಘಟನೆ ಹಿಜ್ಬುಲ್ಲಾ 50ಕ್ಕೂ ಹೆಚ್ಚು ರಾಕೆಟ್‌ಗಳಿಂದ ದಾಳಿ ನಡೆಸಿದ ಪರಿಣಾಮ ಅನೇಕ ಮನೆಗಳು ಹಾನಿಯಾಗಿವೆ.
ಗೋಲನ್ ಹೈಟ್ಸ್‌ನಲ್ಲಿ ಬುಧವಾರ ನಡೆದ ದಾಳಿಯಲ್ಲಿ ಗಾಯಗೊಂಡ 30 ವರ್ಷದ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಒಂದು ಮನೆ ಬೆಂಕಿಗೆ ಆಹುತಿಯಾಗಿದ್ದು, ಅನಿಲ ಸೋರಿಕೆಯನ್ನು ನಿಲ್ಲಿಸುವ ಮೂಲಕ ದೊಡ್ಡ ದುರಂತವನ್ನು ತಡೆಯಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ.
ಮಂಗಳವಾರ ರಾತ್ರಿ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ. ಒಬ್ಬರು ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿದ್ದಾರೆ ಎಂದು ಹಿಜ್ಬುಲ್ಲಾ ಸಂಘಟನೆ ತಿಳಿಸಿದೆ.
ಮಿಲಿಟರಿ ತನ್ನ ಗಮನ ಬದಲಿಸುತ್ತಿದೆ’ ಟೆಲ್ ಅವಿವ್: ಇಸ್ರೇಲ್ ಸೇನೆಯು ತನ್ನ ಗಮನವನ್ನು ಗಾಜಾದಿಂದ ಲೆಬನಾನ್‌ನ ಗಡಿಯತ್ತ ಬದಲಾಯಿಸುತ್ತಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದರು. ಮಂಗಳವಾರ ಉತ್ತರ ಇಸ್ರೇಲ್‌ನಲ್ಲಿ ಪ್ರವಾಸ ಕೈಗೊಂಡಿರುವ ಗ್ಯಾಲಂಟ್ ಗಾಜಾದಲ್ಲಿ ಇಸ್ರೇಲ್ ತನ್ನ ಚಟುವಟಿಕೆಗಳನ್ನು ಕಡಿಮೆ ಮಾಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.