ADVERTISEMENT

Israel–Hamas War: ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 41,788ಕ್ಕೆ ಏರಿಕೆ

ಏಜೆನ್ಸೀಸ್
Published 3 ಅಕ್ಟೋಬರ್ 2024, 10:02 IST
Last Updated 3 ಅಕ್ಟೋಬರ್ 2024, 10:02 IST
<div class="paragraphs"><p>ಇಸ್ರೇಲ್‌ ದಾಳಿಯಿಂದ ಗಾಜಾದಲ್ಲಿ ಹಾನಿಯಾಗಿರುವ ಪ್ರದೇಶ</p></div>

ಇಸ್ರೇಲ್‌ ದಾಳಿಯಿಂದ ಗಾಜಾದಲ್ಲಿ ಹಾನಿಯಾಗಿರುವ ಪ್ರದೇಶ

   

ರಾಯಿಟರ್ಸ್ ಚಿತ್ರ

ಗಾಜಾ: ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ 41,788 ಜನರು ಮೃತಪಟ್ಟಿದ್ದಾರೆ ಎಂದು ಹಮಾಸ್‌ ನೇತೃತ್ವದ ಗಾಜಾ ಆರೋಗ್ಯ ಇಲಾಖೆ ಗುರುವಾರ ತಿಳಿಸಿದೆ.

ADVERTISEMENT

ಕಳೆದ 24 ಗಂಟೆಯಲ್ಲಿ 99 ಮಂದಿ ಮೃತಪಟ್ಟು, 169 ಜನರು ಗಾಯಗೊಂಡಿದ್ದಾರೆ ಎಂದಿರುವ ಆರೋಗ್ಯ ಇಲಾಖೆ, ಇದುವರೆಗೆ 96,794 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ 2023ರ ಅಕ್ಟೋಬರ್‌ 7ರಂದು ದಾಳಿ ನಡೆಸಿದ್ದರು. ಈ ವೇಳೆ 1,200 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಸೇನೆ ಗಾಜಾ ಮೇಲೆ ದಾಳಿ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.