ADVERTISEMENT

ಹಮಾಸ್ ನಾಯಕ ಯಹ್ಯಾ ಸಿನ್ವರ್ ಹತ್ಯೆ: ನೇತನ್ಯಾಹುಗೆ ಕರೆ ಮಾಡಿ ಅಭಿನಂದಿಸಿದ ಬೈಡನ್‌

ಏಜೆನ್ಸೀಸ್
Published 18 ಅಕ್ಟೋಬರ್ 2024, 5:03 IST
Last Updated 18 ಅಕ್ಟೋಬರ್ 2024, 5:03 IST
<div class="paragraphs"><p>ಇಸ್ರೇಲ್ ಪ್ರಧಾನಿ ನೇತನ್ಯಾಹುಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್</p></div>

ಇಸ್ರೇಲ್ ಪ್ರಧಾನಿ ನೇತನ್ಯಾಹುಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

   

– ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ಹಮಾಸ್‌ ನಾಯಕ ಯಹ್ಯಾ ಸಿನ್ವರ್‌ ಹತ್ಯೆಯು ಗಾಜಾ ಪಟ್ಟಿಯಲ್ಲಿ ಕದನ ವಿರಾಮದ ಅವಕಾಶ ಸೃಷ್ಟಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಅಲ್ಲದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಿಗೆ ಕರೆ ಮಾಡಿ, ಸಿನ್ವರ್‌ನನ್ನು ಹತ್ಯೆ ಮಾಡಿದ್ದಕ್ಕೆ ಅಭಿನಂದನೆ ತಿಳಿಸಿದ್ದಾರೆ.

ADVERTISEMENT

‘ಇದು ಯುದ್ಧಕ್ಕೆ ಅಂತ್ಯ ಹಾಡಿ ಒತ್ತೆಯಾಳುಗಳನ್ನು ಮರಳಿ ಮನೆಗೆ ಕರೆತರುವ ಸಮಯ. ನಾವು ಅದನ್ನು ಮಾಡಲು ತಯಾರಿದ್ದೇವೆ. ಅಲ್ಲಿ ಕದನ ವಿರಾಮ ಏರ್ಪಾಡಾಗುವ ವಿಶ್ವಾಸ‘ ಇದೆ ಎಂದು ಹೇಳಿದ್ದಾರೆ.

ನಮ್ಮ ಗುರಿ ಸಾಧನೆಗೆ ಯಹ್ಯಾ ಸಿನ್ವರ್‌ ಅಡ್ಡಿಯಾಗಿದ್ದರು. ಇನ್ನು ಆ ಅಡ್ಡಿ ಇಲ್ಲ. ಆದರೆ ನಮ್ಮ ಮುಂದೆ ಇನ್ನೂ ಬಹಳ ಕೆಲಸ ಉಳಿದಿವೆ’ ಎಂದು ಹೇಳಿದ್ದಾರೆ. 2023ರ ಅಕ್ಟೋಬರ್‌ 7ರಂದು ಇಸ್ರೇಲ್ ಮೇಲೆ ನಡೆದ ಹಮಾಸ್ ದಾಳಿ ಮುಖ್ಯ ರೂವಾರಿ ಸಿನ್ವರ್‌ ಆಗಿದ್ದ.

‘ಗುರುವಾರ ಸಂಜೆ ಬೆಂಜಮಿನ್ ನೇತನ್ಯಾಹು ಅವರಿಗೆ ಜೋ ಬೈಡನ್ ಕರೆ ಮಾಡಿದ್ದಾರೆ. ಒತ್ತೆಯಾಳುಗಳ ಬಿಡುಗಡೆ ಬಗ್ಗೆ ಮಾತುಕತೆ ನಡೆದಿದ್ದು, ಗುರಿ ಸಾಧಿಸಲು ಜಂಟಿಯಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ’ ಎಂದು ಇಸ್ರೇಲ್ ಪ್ರಕಟಣೆಯಲ್ಲಿ ಹೇಳಿದೆ.

‘ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಆಕ್ರಮಣದ ಬಗ್ಗೆ ಬೈಡನ್ ಆಗಾಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಸ್ರೇಲ್‌ಗೆ ಯುದ್ಧತಂತ್ರದ ಕೊರತೆ ಇದೆ ನೇರವಾಗಿ ನೇತನ್ಯಾಹು ಬಳಿಯೇ ಹೇಳಿದ್ದರು’ ಎಂದು ತನಿಖಾ ಪತ್ರಕರ್ತರ ಬಾಬ್‌ ವುಡ್‌ವರ್ಡ್‌ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಇದೇ ಕಾರಣದಿಂದಾಗಿಯೇ ಬೈಡನ್ ಹಾಗೂ ನೇತನ್ಯಾಹು ನಡುವೆ ಹೆಚ್ಚಿನ ಸಂಭಾಷಣೆ ನಡೆದಿರಲಿಲ್ಲ. ಇಸ್ರೇಲ್‌ ಮೇಲೆ ಇರಾನ್ ದಾಳಿ ಮಾಡಿ ಬಳಿಕವಷ್ಟೇ, ಪ್ರತಿದಾಳಿಯ ತಂತ್ರಗಳ ಬಗ್ಗೆ ಚರ್ಚಿಸಲು ಸುಮಾರು ಎರಡು ತಿಂಗಳ ಬಳಿಕ ಅಕ್ಟೋಬರ್ ತಿಂಗಳ ಆರಂಭದಲ್ಲಿ ಫೋನ್ ಮಾತುಕತೆ ನಡೆಸಿದ್ದರು. ಇದೀಗ ಸಿನ್ವರ್ ಹತ್ಯೆ ಬಳಿಕ ಮತ್ತೆ ಬೈಡನ್‌ ಅವರು ನೇತನ್ಯಾಹು ಅವರಿಗೆ ಕರೆ ಮಾಡಿದ್ದಾರೆ.

(ವಿವಿಧ ಏಜೆನ್ಸಿಗಳ ವರದಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.