ADVERTISEMENT

Israel-Hezbollah War: ಹಿಜ್ಬುಲ್ಲಾಗೆ ಆರಂಭದಲ್ಲೇ ಪೆಟ್ಟು ಕೊಟ್ಟ ಇಸ್ರೇಲ್!

ಲೆಬನಾನ್‌ನಲ್ಲಿ ಪೇಜರ್‌ಗಳ ಸ್ಪೋಟದ ಬೆನ್ನಲ್ಲೇ ಹಿಜ್ಬುಲ್ಲಾ ಸಂಘಟನೆ ಇಸ್ರೇಲ್ ಮೇಲೆ ವ್ಯಗ್ರವಾಗಿದ್ದು, ಪ್ರತಿ ದಾಳಿ ಆರಂಭಿಸಲು ಗುರುವಾರ ಸಿದ್ದತೆ ನಡೆಸಿತ್ತು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2024, 3:25 IST
Last Updated 20 ಸೆಪ್ಟೆಂಬರ್ 2024, 3:25 IST
<div class="paragraphs"><p><strong>Israeli fighter jet</strong></p></div>

Israeli fighter jet

   

REUTERS

ಬೆಂಗಳೂರು: ಲೆಬನಾನ್‌ನಲ್ಲಿ ಪೇಜರ್‌ಗಳ ಸ್ಪೋಟದ ಬೆನ್ನಲ್ಲೇ ಹಿಜ್ಬುಲ್ಲಾ ಸಂಘಟನೆ ಇಸ್ರೇಲ್ ಮೇಲೆ ವ್ಯಗ್ರವಾಗಿದ್ದು, ಪ್ರತಿ ದಾಳಿ ಆರಂಭಿಸಲು ಗುರುವಾರ ಸಿದ್ದತೆ ನಡೆಸಿತ್ತು.

ADVERTISEMENT

ಆದರೆ, ಹಿಜ್ಬುಲ್ಲಾದ ಈ ಸಿದ್ದತೆಗೆ ಆರಂಭದಲ್ಲೇ ಇಸ್ರೇಲ್ ಪೆಟ್ಟು ಕೊಟ್ಟಿದೆ. ‘ಹಿಜ್ಬುಲ್ಲಾ ಇಸ್ರೇಲ್ ಮೇಲೆ ದಾಳಿ ಮಾಡಲು ಸಿದ್ದತೆ ನಡೆಸಿತ್ತು. ಈ ವೇಳೆ ಗುಪ್ತಚರ ಮಾಹಿತಿ ತಿಳಿದು ನಾಮ್ಮ ವಾಯಸೇನೆ ಹಿಜ್ಬುಲ್ಲಾದ 30 ಕ್ಷೀಪಣಿ ಲಾಂಚರ್‌ಗಳನ್ನು ಹೊಡೆದುರಳಿಸಿದೆ. 150 ಕ್ಷೀಪಣಿ ಲಾಂಚರ್‌ಗಳು ಇಸ್ರೇಲ್–ಲೆಬನಾನ್ ಗಡಿಯಲ್ಲಿ ಸಿದ್ದವಾಗಿದ್ದವು’ ಎಂದು ಇಸ್ರೇಲ್‌ ಹೇಳಿದೆ.

ಇಸ್ರೇಲ್‌ನ ಇಸ್ರೇಲ್ ರಕ್ಷಣಾ ಪ‍ಡೆ ಎಕ್ಸ್‌ ತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಹಿಜ್ಬುಲ್ಲಾದವರು ಸುಮ್ಮನಿರದಿದ್ದರೇ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಎಚ್ಚರಿಸಿದೆ.

ಇದೇ ವೇಳೆ ಗಾಜಾ ಯುದ್ಧ ಮುಗಿಯುವವರೆಗೂ ಇಸ್ರೇಲ್ ಉತ್ತರದ ಕಡೆ (ಲೆಬನಾನ್ ಗಡಿಯತ್ತ) ಬರುವುದಿಲ್ಲ ದಾಳಿ ನಡೆಸಿ ಎಂದು ಹಿಜ್ಬುಲ್ಲಾ ಮುಖಂಡರು ತಮ್ಮ ಸಂಘಟನೆಯನ್ನು ಪ್ರಚೋದಿಸಿದ್ದಾರೆ.

ಇನ್ನೊಂದೆಡೆ ತಕ್ಷಣವೇ ಕದನ ವಿರಾಮ ಘೋಷಿಸಿ ಎಂದು ಬ್ರಿಟನ್ ಇಸ್ರೇಲ್ ಹಾಗೂ ಲೆಬನಾನ್‌ಗೆ ಕರೆ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಮಿಡಲ್ ಈಸ್ಟ್‌ನಲ್ಲಿ ಅಮೆರಿಕದ ಸೇನಾಪಡೆಗಳು ಅಲರ್ಟ್‌ ಸ್ಥಿತಿಯಲ್ಲಿವೆ ಎಂದು ಪೆಂಟಗಾನ್ ವಕ್ತಾರೆ ಸರ್ಬಿನಾ ಸಿಂಗ್ ಹೇಳಿದ್ದಾರೆ.

ಇತ್ತೀಚೆಗೆ ಉತ್ತರ ಗಡಿ ಭಾಗದಲ್ಲಿ ಇಸ್ರೇಲ್‌ ಹೆಚ್ಚಿನ ಪಡೆಗಳನ್ನು ನಿಯೋಜಿಸುತ್ತಿದೆ. ಗಾಜಾ ಗಡಿಯಿಂದ ಸೇನಾ ಪಡೆಗಳನ್ನು ಉತ್ತರದ ಗಡಿ ಭಾಗಕ್ಕೆ ಸ್ಥಳಾಂತರಿಸುವುದರಲ್ಲಿ ತೊಡಗಿದೆ. ಇದರ ನಡುವೆ ಅಧಿಕಾರಿಗಳು ವಾಗ್ದಾಳಿಯನ್ನೂ ಹೆಚ್ಚಿಸಿದ್ದಾರೆ. ಈ ಹಿಂದೆಯೂ ಇಸ್ರೇಲ್‌ ಮತ್ತು ಹಿಜ್ಬುಲ್ಲಾ ನಡುವಿನ ಹೋರಾಟವು ಹಲವು ಬಾರಿ ಉಲ್ಬಣಗೊಂಡಿದ್ದಿದೆ. 

ಈ ಬಾರಿಯ ಪರಿಸ್ಥಿತಿ ಭಿನ್ನವಾಗಿದೆ. ಲೆಬನಾನ್‌ನಲ್ಲಿ ಮಂಗಳವಾರ ಮತ್ತು ಬುಧವಾರ ಪೇಜರ್‌ಗಳು, ವಾಕಿ–ಟಾಕಿಗಳು ಮತ್ತು ಇತರ ಸಾಧನಗಳು ಸ್ಫೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟದ್ದಾರೆ. ಸಹಸ್ರಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಸ್ಫೋಟಗಳಿಗೆ ಇಸ್ರೇಲ್‌ ಕಾರಣ ಎಂಬುದು ಹಿಜ್ಬುಲ್ಲಾದ ಆರೋಪವಾಗಿದೆ. ಅಲ್ಲದೆ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಶಪಥ ಕೂಡ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.