ADVERTISEMENT

ಜಗತ್ತಿಗೆ ಇನ್ನೊಂದು ಯುದ್ಧ ನಿಭಾಯಿಸುವ ಶಕ್ತಿ ಇಲ್ಲ: ವಿಶ್ವಸಂಸ್ಥೆಯ ಕಾರ್ಯದರ್ಶಿ

ಪಿಟಿಐ
Published 14 ಏಪ್ರಿಲ್ 2024, 5:07 IST
Last Updated 14 ಏಪ್ರಿಲ್ 2024, 5:07 IST
<div class="paragraphs"><p>ಆಂಟೊನಿಯೊ ಗುಟೇರಸ್</p></div>

ಆಂಟೊನಿಯೊ ಗುಟೇರಸ್

   

ವಿಶ್ವಸಂಸ್ಥೆ: ಇಸ್ರೇಲ್ ಮೇಲೆ ವಾಯುದಾಳಿ ನಡೆಸಿದ ಇರಾನ್‌ನ ನಡೆಯನ್ನು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೊನಿಯೊ ಗುಟೇರಸ್ ತೀವ್ರವಾಗಿ ಖಂಡಿಸಿದ್ದಾರೆ. ಮಧ್ಯಪ್ರಾಚ್ಯಕ್ಕಾಗಲಿ, ವಿಶ್ವಕ್ಕಾಗಲಿ ಮತ್ತೊಂದು ಯುದ್ಧವನ್ನು ನಿಭಾಯಿಸುವಷ್ಟು ತ್ರಾಣವಿಲ್ಲ ಎಂದು ಅವರು ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಸೇನಾ ಮುಖಾಮುಖಿಗಳಿಗೆ ಕಾರಣವಾಗುವ ಯಾವುದೇ ಕ್ರಮವನ್ನು ತಪ್ಪಿಸಲು ಉಭಯ ಪಕ್ಷಗಳು ಗರಿಷ್ಠ ಸಂಯಮವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ. ಅಲ್ಲದೆ ಯುದ್ಧ ವಿರಾಮಕ್ಕೆ ಆಗ್ರಹಿಸಿದ್ದಾರೆ.

ADVERTISEMENT

ಪ್ರದೇಶವ್ಯಾಪಿ ಯುದ್ಧಗಳು ಹೆಚ್ಚುತ್ತಿರುವುದರ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರಾಚ್ಯಕ್ಕೋ, ವಿಶ್ವಕ್ಕೋ ಮತ್ತೊಂದು ಯುದ್ಧವನ್ನು ನಿಭಾಯಿಸುವಷ್ಟು ಶಕ್ತಿ ಇಲ್ಲ ಎಂದು ನಾನು ಹಲವು ಬಾರಿ ಒತ್ತಿ ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ.

ಏ.1ರಂದು ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿನ ಇರಾನ್‌ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಭಾನುವಾರ ವಾಯುದಾಳಿ ನಡೆಸಿದೆ.

ಉಭಯ ರಾಷ್ಟ್ರಗಳ ನಡುವೆ ಕದನ ಉಲ್ಬಣಗೊಳ್ಳುತ್ತಿದ್ದು, ಇಂದು ಸಂಜೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಸೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.