ಜೆರುಸಲೆಮ್: ಇಸ್ರೇಲ್‌ನಲ್ಲಿ ಕೋವಿಡ್ ಲಸಿಕೆ ಅಭಿಯಾನ ಸಂಪೂರ್ಣ ಯಶಸ್ವಿಯಾಗಿದ್ದು, ಕೋವಿಡ್ ಮಾರ್ಗಸೂಚಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಜನರು ಇನ್ನು ಮುಂದೆ ಒಳಾಂಗಣಗಳಲ್ಲೂ ಮಾಸ್ಕ್ ಧರಿಸದೆ ಓಡಾಡಬಹುದಾಗಿದೆ.
ಕೋವಿಡ್ ನಿರ್ಬಂಧಗಳನ್ನು ದೇಶವು ಮಂಗಳವಾರ ತೆರವುಗೊಳಿಸಿದ್ದು, ಜನರು ವಿಮಾನಗಳಲ್ಲಿ ಮತ್ತು ಇನ್ನಿತರ ಸಂಚಾರ ಮಾರ್ಗಗಳಲ್ಲಿ ಮಾಸ್ಕ್ ಧರಿಸಬೇಕಾಗಿದೆ. ಹಾಗೆಯೇ ನರ್ಸಿಂಗ್ ಹೋಂಗಳಲ್ಲಿ ಮತ್ತು ಇತರ ದೀರ್ಘಕಾಲೀನ ಆರೋಗ್ಯ ಚಿಕಿತ್ಸೆಗಳಲ್ಲಿರುವವರು ಮಾಸ್ಕ್ ಧರಿಸಬೇಕಿದೆ.
ಇಸ್ರೇಲ್ ತನ್ನ ವಯಸ್ಕ ಜನಸಂಖ್ಯೆಯಲ್ಲಿ ಸುಮಾರು ಶೇ 85ರಷ್ಟು ಜನರಿಗೆ ಲಸಿಕೆ ಹಾಕಿದೆ. ಇದರಿಂದಾಗಿ ಶಾಲೆಗಳು ಮತ್ತು ಎಲ್ಲ ವ್ಯವಹಾರಗಳು ಸಂಪೂರ್ಣ ಪುನರಾರಂಭವಾಗಲಿವೆ. 90 ಲಕ್ಷ ಜನಸಂಖ್ಯೆಗೂ ಹೆಚ್ಚಿರುವ ದೇಶದಲ್ಲಿ ಕೆಲವೇ ಡಜನ್ ಸಕ್ರಿಯ ರೋಗಿಗಳಿದ್ದಾರೆ.
ಹೊಸ ರೂಪಾಂತರಿ ಕೋವಿಡ್‌ನಿಂದಾಗಿ ದೇಶದ ಹೊರಗಿನಿಂದ ಬರುವವರ ಬಗ್ಗೆ ಅಧಿಕಾರಿಗಳು ಜಾಗ್ರತೆ ವಹಿಸಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ ಪ್ರವಾಸಿಗರಿಗೆ ಇಸ್ರೇಲ್ ನಿರ್ಬಂಧ ವಿಧಿಸಿತ್ತು. ದೇಶಕ್ಕೆ ಭೇಟಿ ನೀಡುವ ಎಲ್ಲ ಪ್ರವಾಸಿಗರು ಲಸಿಕೆ ಹಾಕಿಸಿಕೊಂಡ ದಾಖಲೆಗಳನ್ನು ಹಾಜರುಪಡಿಸಬೇಕಿದೆ.
ಇದನ್ನೂ ಓದಿ... ಬೆದರಿಕೆ ಆರೋಪ: ನ್ಯಾಟೊ ನಾಯಕರ ವಿರುದ್ಧ ಚೀನಾ ಕಿಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.