ADVERTISEMENT

ಗಾಜಾವನ್ನು ಕೂಡಲೇ ತೊರೆಯಿರಿ: ಪ್ಯಾಲೆಸ್ಟೀನಿಯರಿಗೆ ಇಸ್ರೇಲ್‌ ತಾಕೀತು

ಏಜೆನ್ಸೀಸ್
Published 10 ಜುಲೈ 2024, 14:49 IST
Last Updated 10 ಜುಲೈ 2024, 14:49 IST
<div class="paragraphs"><p>ಗಾಜಾ ಮೇಲಿನ ಇಸ್ರೇಲ್‌ ದಾಳಿ ವಿರೋಧಿಸಿ ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಪ್ರತಿಭಟನೆಯ ವೇಳೆ ‘ಯುದ್ಧ ನಿಲ್ಲಿಸಿ’ ಎಂಬ ‘ಭಿತ್ತಿಪತ್ರ’ ಹಿಡಿದ ಗಿಳಿಯೊಂದು ಗಮನ ಸೆಳೆಯಿತು</p></div>

ಗಾಜಾ ಮೇಲಿನ ಇಸ್ರೇಲ್‌ ದಾಳಿ ವಿರೋಧಿಸಿ ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಪ್ರತಿಭಟನೆಯ ವೇಳೆ ‘ಯುದ್ಧ ನಿಲ್ಲಿಸಿ’ ಎಂಬ ‘ಭಿತ್ತಿಪತ್ರ’ ಹಿಡಿದ ಗಿಳಿಯೊಂದು ಗಮನ ಸೆಳೆಯಿತು

   

ಜೆರುಸಲೇಂ: ಗಾಜಾಪಟ್ಟಿಯಲ್ಲಿರುವ ಅತಿ ದೊಡ್ಡ ನಗರವನ್ನು ಕೂಡಲೇ ತೊರೆಯಬೇಕು ಎಂದು ಇಸ್ರೇಲ್‌ ಸೇನೆಯು ಎಲ್ಲ ಪ್ಯಾಲೆಸ್ಟೀನಿಯರಿಗೆ ಆದೇಶಿಸಿದೆ.

ನಗರದ ವಿವಿಧೆಡೆ ಮತ್ತೆ ಗುಂಪುಗೂಡುತ್ತಿರುವ ಹಮಾಸ್‌ ಬಂಡುಕೋರರನ್ನು ಗುರಿಯಾಗಿಸಿ ಕಾರ್ಯಾಚರಣೆಯನ್ನು ಆರಂಭಿಸಲಾಗುವುದು ಎಂದು ಸೇನೆಯು ಹೇಳಿದೆ.

ADVERTISEMENT

ಇಸ್ರೇಲ್‌ ಸೇನೆ ಸದ್ಯ ಗಾಜಾದ ಅತಿ ದೊಡ್ಡ ನಗರವನ್ನು ಸುತ್ತುವರಿದಿದೆ. ದಾಳಿ ಹಿನ್ನೆಲೆಯಲ್ಲಿ ಸಾವಿರಾರು ಪ್ಯಾಲೆಸ್ಟೀನಿಯರು ಈಗಾಗಲೇ ಗಾಜಾ ಪಟ್ಟಿ ತೊರೆದಿದ್ದಾರೆ. ಆರಂಭದಲ್ಲಿ ದಾಳಿ ನಡೆಸಿದ್ದ ಸ್ಥಳದಲ್ಲಿ ಹಮಾಸ್ ಬಂಡುಕೋರರು ಮತ್ತೆ ಗುಂಪು ಸೇರುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಿದೆ.

ಹಮಾಸ್‌ ಬಂಡುಕೋರರು ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದು, 250 ಜನರನ್ನು ಅಪಹರಿಸಿ ಒತ್ತೆ ಇರಿಸಿಕೊಂಡಿತ್ತು. ದಾಳಿಯಲ್ಲಿ ಸುಮಾರು 1,200 ಜನರು ಸತ್ತಿದ್ದರು. ಪ್ರತಿಯಾಗಿ ಇಸ್ರೇಲ್‌ ಸೇನೆ ತೀವ್ರ ವಾಯುದಾಳಿ ಆರಂಭಿಸಿತ್ತು. ಪರಿಣಾಮ, ಇದುವರೆಗೆ ಗಾಜಾದಲ್ಲಿ 38,000 ಜನರು ಸತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.