ADVERTISEMENT

ಟೆಲ್‌ಅವೀವ್‌ನಲ್ಲಿ ಗುಂಡಿನ ದಾಳಿ: 6 ಮಂದಿ ಸಾವು

ಇಸ್ರೇಲ್‌ ಮೇಲೆ 180 ಕ್ಷಿಪಣಿ ದಾಳಿ ನಡೆಸಿದ ಇರಾನ್‌ l ಸುರಕ್ಷಿತ ತಾಣಗಳಿಗೆ ತೆರಳುವಂತೆ ಸೂಚನೆ

ಏಜೆನ್ಸೀಸ್
Published 1 ಅಕ್ಟೋಬರ್ 2024, 23:43 IST
Last Updated 1 ಅಕ್ಟೋಬರ್ 2024, 23:43 IST
<div class="paragraphs"><p>ಕ್ಷಿಪಣಿ ದಾಳಿ</p></div>

ಕ್ಷಿಪಣಿ ದಾಳಿ

   

(ರಾಯಿಟರ್ಸ್ ಚಿತ್ರ)

ಜೆರುಸಲೇಂ: ಟೆಲ್‌ಅವೀವ್‌ನಲ್ಲಿ ಮಂಗಳವಾರ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ.

ADVERTISEMENT

ದಕ್ಷಿಣ ಟೆಲ್‌ಅವೀವ್‌ನ ಜಾಫಾ ನೆರೆಹೊರೆಯ ಬುಲೆವಾರ್ಡ್‌ನಲ್ಲಿ ಶಂಕಿತ ರಿಬ್ಬರು ಗುಂಡು ಹಾರಿಸಿದ್ದಾರೆ. ಇವರಿಬ್ಬರನ್ನೂ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ.

ಇಸ್ರೇಲ್‌ನ ಮೇಲೆ ಇರಾನ್‌ ಮಂಗಳವಾರ ರಾತ್ರಿ 180 ಕ್ಷಿಪಣಿ ದಾಳಿ ನಡೆಸುವ ಮುನ್ನ ಈ ಘಟನೆ ನಡೆದಿದೆ.

ನಾಗರಿಕರಿಗೆ ಎಚ್ಚರಿಕೆ ಗಂಟೆ ಮೊಳಗಿಸಿರುವ ಇಸ್ರೇಲ್‌, ಸುರಕ್ಷಿತ ತಾಣಗಳು ಹಾಗೂ ಆದಷ್ಟು ಬಾಂಬ್‌ ‌ಶೆಲ್ಟರ್‌ಗಳ ಬಳಿಯೇ ಇರಬೇಕು ಎಂದು ಸಲಹೆ ನೀಡಿದೆ.

ದಾಳಿ ಮಾಡಿದಲ್ಲಿ ಪ್ರತಿರೋಧ ಎದುರಿಸಬೇಕಾದಿತು ಎಂದು ಇಸ್ರೇಲ್ ಎಚ್ಚರಿಸಿದೆ.

ಭೂಸೇನೆ ಕಾರ್ಯಾಚರಣೆಗೆ ಸಜ್ಜು:

ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಭೂಸೇನೆ ದಾಳಿಗೆ ನಿರ್ಧರಿಸಿರುವ ಇಸ್ರೇಲ್, ದಕ್ಷಿಣ ಲೆಬನಾನ್‌ನ ಗಡಿಭಾಗದಿಂದ ತೆರವುಗೊಳ್ಳಬೇಕು 24ಕ್ಕೂ ಹೆಚ್ಚು ಸಮುದಾಯಗಳಿಗೆ ಸೇರಿದ ನಿವಾಸಿಗಳಿಗೆ ತಾಕೀತು ಮಾಡಿದೆ.

‘ಎಕ್ಸ್‌’ ಜಾಲತಾಣದಲ್ಲಿ ಈ ಕುರಿತು ಎಚ್ಚರಿಕೆ ನೋಟಿಸ್‌ ನೀಡಿರುವ ಇಸ್ರೇಲ್‌ ಸೇನೆಯ ಅರೇಬಿಕ್ ವಕ್ತಾರರು, ‘ಗಡಿಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಅವಾಲಿ ನದಿಯ ಉತ್ತರ ಭಾಗದಿಂದ ಜನರು ತೆರವು ಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ಇದು, 2006ರ ಯುದ್ಧದವೇಳೆ ಇಸ್ರೇಲ್ –ಹಿಜ್ಬುಲ್ಲಾ ನಡುವೆ ಬಫರ್ ವಲಯ ಎಂದು ವಿಶ್ವಸಂಸ್ಥೆ ಘೋಷಿಸಿದ್ದ, ಲಿಟನಿ ನದಿ ಪ್ರದೇಶದಿಂದ 30 ಕಿ.ಮೀ. ದೂರದಲ್ಲಿದೆ.

ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಬಂಡುಕೋರರ ಗುರಿಯಾಗಿಸಿ ಈ ಸೀಮಿತ ಕಾರ್ಯಾಚರಣೆ ನಡೆಯಲಿದೆ. ಭೂಸೇನೆಗೆ ಬೆಂಬಲವಾಗಿ ವಾಯುದಾಳಿಯು ನಡೆಯಲಿದೆ. ತಿಂಗಳು ಕಾರ್ಯಾಚರಣೆಗೆ ಸೇನೆಗೆ ತರಬೇತಿ ನೀಡಿದೆ’ ಎಂದು ತಿಳಿಸಿದೆ.

ನೇರ ಸಂಘರ್ಷಕ್ಕೆ ಸಿದ್ಧ:

ಇನ್ನೊಂದೆಡೆ ‘ನೇರ ಸಂಘರ್ಷಕ್ಕೆ ಸಿದ್ಧ’ ಎಂದು ಹಿಜ್ಬುಲ್ಲಾ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ. ಹಿಜ್ಬುಲ್ಲಾದ ನಾಯಕರಾದ ಹಸನ್‌ ನಸ್ರಲ್ಲಾ ಹಾಗೂ ಇತರೆ ನಾಯಕರ ಹತ್ಯೆಯ ಬಳಿಕವೂ ಈ ಹೇಳಿಕೆ ಹೊರಬಿದ್ದಿದೆ.

ದ.ಕೊರಿಯಾ: ಕ್ಷಿಪಣಿ ಪ್ರದರ್ಶನ 

ಅಧಿಕ ಸಾಮರ್ಥ್ಯ ಮತ್ತು ಪರಿಣಾಮಕಾರಿ ಎನ್ನಲಾದ ಹೊಸ ಖಂಡಾಂತರ ಕ್ಷಿಪಣಿಯನ್ನು ದಕ್ಷಿಣ ಕೊರಿಯಾ ಶನಿವಾರ ಪ್ರದರ್ಶಿಸಿದೆ.

‘ಉತ್ತರ ಕೊರಿಯಾ ಒಂದು ವೇಳೆ ಅಣ್ವಸ್ತ್ರ ಬಳಕೆಗೆ ಯತ್ನಿಸಿದಲ್ಲಿ, ತೀವ್ರ ಪ್ರತಿರೋಧ ಎದುರಿಸಲಿದೆ’ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷರು ಎಚ್ಚರಿಸಿ ದ್ದಾರೆ. ಕಾರ್ಯಕ್ರಮದಲ್ಲಿ ದಕ್ಷಿಣ ಕೊರಿಯಾ 340 ಸೇನಾ ಪರಿಕರಗಳನ್ನು ಪ್ರದರ್ಶಿಸಿತು. ಇದರಲ್ಲಿ ಅಧಿಕ ಸಾಮರ್ಥ್ಯದ ಹ್ಯೂನ್ಮೂ–5 ಕ್ಷಿಪಣಿ ಸೇರಿದೆ. ‘8 ಟನ್‌ ತೂಕದ ಸಿಡಿತಲೆ ಒಯ್ಯುವ ಸಾಮರ್ಥ್ಯದ ಕ್ಷಿಪಣಿ ಉತ್ತರ ಕೊರಿಯಾದ ಭೂಗತ ಬಂಕರ್‌ಗಳನ್ನು ನಾಶಪಡಿಸಬಲ್ಲದು’ ಎಂದು ಸೇನೆ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.