ADVERTISEMENT

ಈಗಲೇ ಹೊರಟುಬಿಡಿ...! ಗಾಜಾ ನಿವಾಸಿಗಳಿಗೆ ಬೆಂಜಮಿನ್‌ ನೇತನ್ಯಾಹು ಎಚ್ಚರಿಕೆ

ಇಸ್ರೇಲ್‌ –ಪ್ಯಾಲೆಸ್ಟೀನ್‌ ಸಂಘರ್ಷ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2023, 2:40 IST
Last Updated 8 ಅಕ್ಟೋಬರ್ 2023, 2:40 IST
<div class="paragraphs"><p>ಬೆಂಜಮಿನ್‌ ನೇತನ್ಯಾಹು</p></div>

ಬೆಂಜಮಿನ್‌ ನೇತನ್ಯಾಹು

   

ಜೆರುಸಲೇಂ: ಹಮಾಸ್‌ ಬಂಡುಕೋರರು ಅಡಗಿರುವ ಪ್ರದೇಶವನ್ನು ಕೂಡಲೇ ತೊರೆಯುವಂತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್‌ ಹಾಗೂ ಪ್ಯಾಲೆಸ್ಟೀನ್‌ ನಡುವಿನ ಸಂಘರ್ಷ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ನೆತನ್ಯಾಹು, ‘ಹಮಾಸ್ ನಿಯೋಜಿಸಿರುವ, ಅಡಗಿರುವ ಮತ್ತು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸ್ಥಳಗಳನ್ನು ನಾವು ಅವಶೇಷಗಳಾಗಿ ಪರಿವರ್ತಿಸುತ್ತೇವೆ. ನಾನು ಗಾಜಾ ನಿವಾಸಿಗಳಿಗೆ ಹೇಳುತ್ತೇನೆ... ಈಗಲೇ ಹೊರಟುಬಿಡಿ ಏಕೆಂದರೆ ನಾವು ಎಲ್ಲೆಡೆ ಬಲವಂತವಾಗಿ ಕಾರ್ಯನಿರ್ವಹಿಸುತ್ತೇವೆ’ ಎಂದು ಹೇಳಿದ್ದಾರೆ.

ADVERTISEMENT

ಈ ಕಠಿಣ ಪರಿಸ್ಥಿತಿಯಲ್ಲಿ ಇಸ್ರೇಲ್‌ನ ನಾಗರಿಕರೊಂದಿಗೆ ನಾವು ಒಟ್ಟಾಗಿ ನಿಲ್ಲುತ್ತೇವೆ. ಈ ಯುದ್ಧವು ಬಹಳಷ್ಟು ಸಮಯ ತೆಗೆದುಕೊಳ್ಳಲಿದ್ದು, ಕಠಿಣವಾಗಿರಲಿದೆ. ಸವಾಲಿನ ದಿನಗಳು ನಮ್ಮ ಮುಂದಿವೆ. ದೇವರ ಅನುಗ್ರಹದಿಂದ ಯುದ್ಧದಲ್ಲಿ ನಾವು ಗೆಲ್ಲುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಬೆಂಜಮಿನ್‌ ನೆತನ್ಯಾಹು ತಿಳಿಸಿದ್ದಾರೆ.

ಇಸ್ರೇಲ್‌ ಹಾಗೂ ಪ್ಯಾಲೆಸ್ಟೀನ್‌ ನಡುವಿನ ಸಂಘರ್ಷ ಯುದ್ಧದ ಸ್ವರೂಪವನ್ನು ಪಡೆದಿದ್ದು, ಎರಡೂ ಕಡೆಗಳಿಂದ ನಡೆದ ದಾಳಿ, ಪ್ರತಿದಾಳಿಯಲ್ಲಿ 400ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

ಪ್ಯಾಲೆಸ್ಟೀನ್‌ನ ಹಮಾಸ್‌ ಬಂಡುಕೋರರು ಶನಿವಾರ ನಸುಕಿನಲ್ಲಿ ಗಾಜಾ ಪಟ್ಟಿಯಿಂದ ಇಸ್ರೇಲ್‌ ಮೇಲೆ ನಡೆಸಿದ ದಿಢೀರ್‌ ರಾಕೆಟ್‌ ದಾಳಿಗೆ ಕನಿಷ್ಠ 200 ಮಂದಿ ಸಾವಿಗೀಡಾದರೆ, ಇಸ್ರೇಲ್‌ ನಡೆಸಿದ ಪ್ರತಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿನ ಕನಿಷ್ಠ 200ಕ್ಕೂ ಜನರ ಹತ್ಯೆಯಾಗಿದೆ. ಎರಡೂ ಕಡೆಗಳಲ್ಲಿ ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.