ADVERTISEMENT

ಗಾಜಾದ ಶಿಫಾ ಆಸ್ಪತ್ರೆಯ ಅಡಿಯಲ್ಲಿ ಹಮಾಸ್‌ ಬಂಡುಕೋರರ ಸುರಂಗ ಪತ್ತೆ: ಇಸ್ರೇಲ್

ರಾಯಿಟರ್ಸ್
Published 20 ನವೆಂಬರ್ 2023, 3:08 IST
Last Updated 20 ನವೆಂಬರ್ 2023, 3:08 IST
<div class="paragraphs"><p>ಅಲ್‌ ಶಿಫಾ ಆಸ್ಪತ್ರೆಯ ಅಡಿಯಲ್ಲಿ ಸುರಂಗ ಪತ್ತೆಯಾಗಿರುವ ದೃಶ್ಯ</p></div>

ಅಲ್‌ ಶಿಫಾ ಆಸ್ಪತ್ರೆಯ ಅಡಿಯಲ್ಲಿ ಸುರಂಗ ಪತ್ತೆಯಾಗಿರುವ ದೃಶ್ಯ

   

ರಾಯಿಟರ್ಸ್ ಚಿತ್ರ

ಜೆರುಸಲೇಂ: ಗಾಜಾ ಪಟ್ಟಿಯ ಅತಿದೊಡ್ಡ ಚಿಕಿತ್ಸಾ ಕೇಂದ್ರ ಅಲ್‌ ಶಿಫಾ ಆಸ್ಪತ್ರೆಯ ಅಡಿಯಲ್ಲಿ ಸುರಂಗ ಪತ್ತೆಯಾಗಿದೆ ಎಂದು ಇಸ್ರೇಲ್ ತಿಳಿಸಿದೆ.

ADVERTISEMENT

ಅಲ್‌ ಶಿಫಾ ಆಸ್ಪತ್ರೆಯಲ್ಲಿ ಹಮಾಸ್‌ ಬಂಡುಕೋರರ ನೆಲೆಯ ಪತ್ತೆಗಾಗಿ ಕಳೆದೊಂದು ವಾರದಿಂದ ಇಸ್ರೇಲ್ ಸೇನೆ ಶೋಧ ನಡೆಸಿತ್ತು.

ಆಸ್ಪತ್ರೆಯ ಅಡಿಯಲ್ಲಿ ಹಮಾಸ್‌ ಬಂಡುಕೋರರು ತೋಡಿರುವ ಸುರಂಗ ಎಂದು ವಿವರಿಸಲಾದ ವಿಡಿಯೊವೊಂದನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. 10 ಮೀಟರ್ ಆಳದ ಸುರಂಗವನ್ನು ಎಂಜಿನಿಯರ್‌ಗಳು ಪತ್ತೆ ಹಚ್ಚಿದ್ದಾರೆ. ಈ ಸುರಂಗಕ್ಕೆ 55 ಮೀಟರ್‌ ಉದ್ದದ ಸ್ಫೋಟ ನಿರೋಧಕ ಬಾಗಿಲನ್ನು ಅಳವಡಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಪ್ರತಿ ದಾಳಿಗೆ ತಡೆಯೊಡ್ಡುವ ಉದ್ದೇಶದಿಂದ ಹಮಾಸ್ ಬಂಡುಕೋರರು ಈ ರೀತಿಯ ಬಾಗಿಲುಗಳನ್ನು ಬಳಸುತ್ತಿದ್ದರು ಎಂದು ಇಸ್ರೇಲ್ ಸೇನೆ ಆರೋಪಿಸಿದೆ.

ನೂರಾರು ಕಿಲೋಮೀಟರ್‌ಗಳಷ್ಟು ರಹಸ್ಯ ಸುರಂಗಗಳು, ಬಂಕರ್‌ಗಳು ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದ ಹಮಾಸ್, ಆಸ್ಪತ್ರೆಗಳಂತಹ ಸ್ಥಳಗಳಲ್ಲಿ ನೆಲೆ ಹೊಂದಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.