ADVERTISEMENT

ನೆರವು, ಒತ್ತೆಯಾಳುಗಳಿಗಾಗಿ ಯುದ್ಧಕ್ಕೆ ಸಣ್ಣ ವಿರಾಮ: ನೆತನ್ಯಾಹು

ರಾಯಿಟರ್ಸ್
Published 7 ನವೆಂಬರ್ 2023, 5:28 IST
Last Updated 7 ನವೆಂಬರ್ 2023, 5:28 IST
ಬೆಂಜಾಮಿನ್‌ ನೆತನ್ಯಾಹು
ಬೆಂಜಾಮಿನ್‌ ನೆತನ್ಯಾಹು   

ಟೆಲ್‌ ಅವಿಲ್‌: ಕದನ ವಿರಾಮ ನಿರ್ಣಯವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ನೆರವು ಸಾಮಾಗ್ರಿಗಳ ಪ್ರವೇಶ ಮತ್ತು ಒತ್ತೆಯಾಳುಗಳ ನಿರ್ಗಮನಕ್ಕೆ ಅನುಕೂಲವಾಗುವಂತೆ ಕದನಕ್ಕೆ ಸಣ್ಣ ವಿರಾಮ ನೀಡುವುದಾಗಿ ತಿಳಿಸಿದ್ದಾರೆ.

ಅಮೆರಿಕದ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, ಗಾಜಾದಲ್ಲಿರುವ ಹಮಾಸ್ ಬಂಡುಕೋರರನ್ನು ಸಂಪೂರ್ಣವಾಗಿ ನಾಶ ಮಾಡಿಯೇ ತೀರುವುದಾಗಿ ಪುನರುಚ್ಛರಿಸಿದ್ದಾರೆ.

ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ಮಿತ್ರ ರಾಷ್ಟ್ರಗಳ ಒತ್ತಡದ ಬಗ್ಗೆ ಮಾತನಾಡಿದ ಅವರು, ‘ಕದನ ವಿರಾಮ ಎಂದರೆ ಹಮಾಸ್‌ಗೆ ನಾವು ಶರಣಾದಂತೆ. ಇದು ದೇಶದ ಯುದ್ಧ ಪ್ರಯತ್ನಕ್ಕೆ ಅಡ್ಡಿಪಡಿಸುತ್ತದೆ’ ಎಂದು ಹೇಳಿದರು.

ADVERTISEMENT

‘ನೆರವು ಸಾಮಾಗ್ರಿಗಳ ಪ್ರವೇಶ ಅಥವಾ ಒತ್ತೆಯಾಳುಗಳು ನಿರ್ಗಮಿಸಲು ಯುದ್ದಕ್ಕೆ ಸಣ್ಣ ವಿರಾಮ ನೀಡುವ ಕುರಿತ ಬೇಡಿಕೆಯನ್ನು ಇಸ್ರೇಲ್‌ ಪರಿಗಣಿಸುತ್ತದೆ. ಅಲ್ಲಿ ಒಂದು ಗಂಟೆ, ಇಲ್ಲಿ ಒಂದು ಗಂಟೆ ಎಲ್ಲ ರೀತಿಯಲ್ಲೂ ಪರಿಶೀಲಿಸಲಾಗುತ್ತದೆ’ ಎಂದರು.

‘ಕದನ ವಿರಾಮ ಘೋಷಣೆ ಸಾಧ್ಯವಿಲ್ಲ ಎಂದು ನಾನು ಬಲವಾಗಿ ಭಾವಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.