ಜೆರುಸಲೇಮ್: ಹಮಾಸ್ ಉಗ್ರ ಸಂಘಟನೆಯು ಇಸ್ರೇಲ್‌ನ ಗಡಿಭಾಗದಲ್ಲಿ ಕೃಷಿಕರು ನೆಲೆಸಿರುವ ಕೆಲ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಗಾಜಾಪಟ್ಟಿ ಮೇಲೆ ಯುದ್ಧವಿಮಾನಗಳಿಂದ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಶುಕ್ರವಾರ ಹೇಳಿದೆ.
ಹಮಾಸ್ ಸಂಘಟನೆ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸುತ್ತಿದ್ದ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಲಾಗಿದೆ ಎಂದೂ ಇಸ್ರೇಲ್ ಹೇಳಿದೆ.
ಹಮಾಸ್ ಬೆಂಬಲಿತ ಕಾರ್ಯಕರ್ತರು ಬಾಂಬ್‌ಗಳನ್ನು ತುಂಬಿದ್ದ ಬಲೂನ್‌ಗಳನ್ನು ಬಳಸಿ, ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಆಗಿರುವ ಹಾನಿಯ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ ಎಂದೂ ಮಿಲಿಟರಿ ಹೇಳಿದೆ.
ಮೇ ತಿಂಗಳಲ್ಲಿ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಮಿಲಿಟರಿ ಮಧ್ಯೆ 11 ದಿನಗಳ ಕಾಲ ಸಂಘರ್ಷ ಏರ್ಪಟ್ಟಿತ್ತು. ನಂತರ, ಕದನ ವಿರಾಮ ಘೋಷಿಸಲಾಗಿತ್ತು.
ಇದಾದ ನಂತರ ಈಗ ಇಸ್ರೇಲ್ ಮಿಲಿಟರಿ ಗಾಜಾ ಪಟ್ಟಿ ಮೇಲೆ ನಡೆಸಿದ ಮೂರನೇ ದಾಳಿ ಇದಾಗಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ... ಬೆಂಗಳೂರಿನ ಹಲವೆಡೆ ದೊಡ್ಡ ಶಬ್ಧ: ಜನರಲ್ಲಿ ಆತಂಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.