ಜೆರುಸಲೇಂ: ಲೆಬನಾನ್ ಗಡಿಯಾಚೆಯಿಂದ ದಾಳಿ ಮಾಡಲು ಯತ್ನಿಸಿದ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಎರಡು ಸೆಲ್‌ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.
ಇಸ್ರೇಲ್ ಪ್ಯಾಲೆಸ್ಟೀನ್ ಪ್ರದೇಶದಲ್ಲಿ ಆಕ್ರಮಣ ಮುಂದುವರಿಸಿದರೆ ಇಸ್ರೇಲ್ ಹಾಗೂ ಹಮಾಸ್ ನಡುವಣ ಯುದ್ಧವು ಪ್ರಾದೇಶಿಕ ಸಂಘರ್ಷವಾಗಿ ಮಾರ್ಪಡಾಗಬಹುದು ಎಂದು ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಎಚ್ಚರಿಕೆ ನೀಡಿದ ಮರುದಿನವೇ ಈ ದಾಳಿ ನಡೆದಿದೆ.
‘ಇಸ್ರೇಲ್ ಭೂಪ್ರದೇಶದ ಮೇಲೆ ಲೆಬನಾನ್‌ನಿಂದ ಎರಡು ಉಗ್ರ ಸೆಲ್‌ಗಳು ದಾಳಿ ಯತ್ನ ಮಾಡಿದ್ದಕ್ಕೆ ಪ್ರತೀಕಾರವಾಗಿ, ಐಡಿಎಫ್ (ಇಸ್ರೇಲ್ ಸೇನೆ) ಸೆಲ್‌ಗಳನ್ನು ಹಾಗೂ ಹಿಜ್ಬುಲ್ಲಾ ವೀಕ್ಷಣಾ ಪೋಸ್ಟ್‌ಗಳ ಮೇಲೆ ದಾಳಿ ನಡೆಸಿದೆ’ ಎಂದು ಸೇನಾ ಪ್ರಕಟಣೆ ತಿಳಿಸಿದೆ.
ಉತ್ತರ ಇಸ್ರೇಲ್‌ನಲ್ಲಿ ಲೆಬನಾನ್‌ನಿಂದ ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ದಾಳಿಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.