ADVERTISEMENT

ಪ್ಯಾಲೆಸ್ಟೀನ್‌ಗೆ ನೆರವಾಗುವ UNRWA ನಿಷೇಧಕ್ಕೆ ಕಾನೂನು ಅಂಗೀಕರಿಸಿದ ಇಸ್ರೇಲ್

ರಾಯಿಟರ್ಸ್
Published 29 ಅಕ್ಟೋಬರ್ 2024, 3:56 IST
Last Updated 29 ಅಕ್ಟೋಬರ್ 2024, 3:56 IST
ವಿಶ್ವಸಂಸ್ಥೆ 
ವಿಶ್ವಸಂಸ್ಥೆ    

ಜೆರುಸೇಲಂ‌/ಕೈರೋ: ‌ವಿಶ್ವಸಂಸ್ಥೆ ಪರವಾಗಿ ಕೆಲಸ ಮಾಡುವ ನಿರಾಶ್ರಿತರಗಾಗಿನ ಕಾರ್ಯನಿರತ ಸಂಸ್ಥೆ UNRWA ತನ್ನ ದೇಶದೊಳಗೆ ಕಾರ್ಯನಿರ್ವಹಿಸದಂತೆ ನಿಷೇಧ ಹೇರಿ ಇಸ್ರೇಲ್‌ ಸಂಸತ್ತು ಕಾನೂನು ಅಂಗೀಕರಿಸಿದೆ.

ಗಾಜಾದಲ್ಲಿ ಈಗಾಗಲೇ ಸ್ಥಿತಿ ಹದಗೆಟ್ಟಿದ್ದು, UNRWA ದೇಶದಲ್ಲಿದ್ದರೆ ಅಲ್ಲಿಯ ಜನರ ಸ್ಥಿತಿ ಇನ್ನಷ್ಟು ಹದಗೆಡುವ ಆತಂಕದಿಂದಾಗಿ ಸಂಸ್ಥೆಗೆ ನಿಷೇಧ ಏರಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. 

ಇಸ್ರೇಲ್ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ UNRWA ಕಾರ್ಯಕರ್ತರು ಜವಾಬ್ದಾರರಾಗಿರಬೇಕು ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ADVERTISEMENT

2023ರ ಅ.7ರಂದು ದಕ್ಷಿಣ ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದ ವೇಳೆ ಸಂಸ್ಥೆಯ ಕೆಲವು ಸಿಬ್ಬಂದಿ ಪ್ಯಾಲೆಸ್ಟೀನ್‌ ಸಶಸ್ತ್ರ ಗುಂಪುಗಳಲ್ಲಿ ಸದಸ್ಯರಾಗಿರುವುದಾಗಿ ಇಸ್ರೇಲ್‌ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ UNRWA ಮುಖ್ಯಸ್ಥ ಲಾಝರಿನಿ, ‘ಸಂಸ್ಥೆಯನ್ನು ಅಪಖ್ಯಾತಿಗೊಳಿಸಲು ಮತ್ತು ಪ್ಯಾಲೆಸ್ಟೀನ್‌ ನಿರಾಶ್ರಿತರಿಗೆ ನೆರವು ಮತ್ತು ಸೇವೆಗಳನ್ನು ಒದಗಿಸುವುದನ್ನು ಕಾನೂನುಬದ್ಧಗೊಳಿಸದಿರಲು ನಡೆಸಿದ ಅಭಿಯಾನಗಳಲ್ಲಿ ಇದು ಒಂದು’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.