ADVERTISEMENT

Israel–Hamas war | ರಫಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ; 37 ಸಾವು

ಏಜೆನ್ಸೀಸ್
Published 12 ಫೆಬ್ರುವರಿ 2024, 4:21 IST
Last Updated 12 ಫೆಬ್ರುವರಿ 2024, 4:21 IST
<div class="paragraphs"><p>ಗಾಜಾ ಮೇಲಿನ ದಾಳಿಯ ದೃಶ್ಯ</p></div>

ಗಾಜಾ ಮೇಲಿನ ದಾಳಿಯ ದೃಶ್ಯ

   

ರಾಯಿಟರ್ಸ್ ಚಿತ್ರ

ರಫಾ (ಗಾಜಾ ಪಟ್ಟಿ): ನಾಗರಿಕರನ್ನು ರಕ್ಷಿಸುವ ಸೂಕ್ತ ಯೋಜನೆಯಿಲ್ಲದೆ ರಫಾ ಮೇಲೆ ದಾಳಿ ಮಾಡಬೇಡಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕರೆ ನೀಡಿದ ನಂತರವೂ ಇಸ್ರೇಲ್‌ ದಾಳಿ ನಡೆಸಿದೆ. ಇದರಿಂದಾಗಿ 37 ಮಂದಿ ಮೃತಪಟ್ಟು, ಸಾಕಷ್ಟು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರಾತ್ರೋರಾತ್ರಿ ನಡೆದ ಭಾರೀ ಬಾಂಬ್‌ ದಾಳಿ ರಫಾದಲ್ಲಿ ವ್ಯಾಪಕ ಆತಂಕ ಸೃಷ್ಟಿಸಿದೆ. ದಾಳಿಯಿಂದಾಗಿ ಎರಡು ಮಸೀದಿಗಳು ಮತ್ತು ಸಾಕಷ್ಟು ಮನೆಗಳು ಧ್ವಂಸಗೊಂಡಿವೆ ಎಂದು ಸ್ಥಳೀಯರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಗಾಜಾ ಪಟ್ಟಿಯ ದಕ್ಷಿಣದಲ್ಲಿ ಆರಂಭಿಸಲಾಗಿದ್ದ ಸರಣಿ ದಾಳಿಗಳು ಇದೀಗ ಮುಕ್ತಾಯಗೊಂಡಿವೆ ಎಂದು ಇಸ್ರೇಲ್ ಸೇನೆ ಸೋಮವಾರ (ಫೆ.12) ತಿಳಿಸಿದೆ.

ಇಸ್ರೇಲ್‌ ಸೇನೆಯು ಗಾಜಾ ನಗರಗಳ ಮೇಲೆ ಈ ಹಿಂದೆ ಆಕ್ರಮಣ ನಡೆಸುವುದಕ್ಕೂ ಮುನ್ನ, ಜನರು ಯಾವುದೇ ಯೋಜನೆಗಳಿಲ್ಲದೆ ಕೂಡಲೇ ಸ್ಥಳಾಂತರಗೊಳ್ಳಬೇಕು ಎಂದು ಆದೇಶಿಸಿತ್ತು.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರೊಂದಿಗೆ ಭಾನುವಾರ ಮಾತನಾಡಿದ್ದ ಬೈಡನ್‌, ರಫಾ ನಗರದದಲ್ಲಿ ಸುಮಾರು 10 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ನಾಗರಿಕರ ರಕ್ಷಣೆಯನ್ನು ಖಾತ್ರಿಪಡಿಸುವ ಸೂಕ್ತ ಯೋಜನೆಗಳಿಲ್ಲದೆ ಯಾವುದೇ ಕಾರಣಕ್ಕೂ ದಾಳಿ ನಡೆಸಬಾರದು ಎಂದು ಹೇಳಿದ್ದರು.

ಇಸ್ರೇಲ್‌ ಸೇನೆ, ರಫಾ ಮೇಲೆ ಶನಿವಾರವೂ ವೈಮಾನಿಕ ದಾಳಿ ನಡೆಸಿತ್ತು. 28 ಮಂದಿ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.