ಡಮಸ್ಕಸ್: ಕರಾವಳಿ ನಗರ ಲತಾಕಿಯಾದ ಮೇಲೆ ಇಸ್ರೇಲ್ ಪಡೆಗಳು ವಾಯುದಾಳಿ ನಡೆಸಿದೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮ ‘ಸನಾ’ ಗುರುವಾರ ಹೇಳಿದೆ. ಲತಾಕಿಯ ನಗರದ ಶಸ್ತ್ರಾಸ್ತ್ರ ಕೋಠಿಯನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎನ್ನಲಾಗಿದೆ.
‘ಲತಾಕಿಯಾದ ಮೇಲೆ ಶತ್ರಗಳ ಗುರಿಗಳನ್ನು ವೈಮಾನಿಕ ದಾಳಿ ರಕ್ಷಣಾ ವ್ಯವಸ್ಥೆ ತಡೆದಿದೆ’ ಎಂದು ಸನಾ ತಿಳಿಸಿದೆ.
ಇಸ್ರೇಲ್ ಆಕ್ರಮಣದಿಂದಾಗಿ ಲತಾಕಿಯಾದ ಪ್ರವೇಶದ ದ್ವಾರದ ಬಳಿ ದಾಳಿ ನಡೆದಿದೆ. ಈ ಪ್ರದೇಶ ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಅವರ ಭದ್ರ ಹಿಡಿತದಲ್ಲಿದೆ. ಇಸ್ರೇಲ್ ಯುದ್ಧ ಸಾರಿರುವ ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರಿಗೆ ಅಸ್ಸಾದ್ ಬೆಂಬಲವಾಗಿ ನಿಂತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿರಿಯಾ ಮೇಲೆ ಇಸ್ರೇಲ್ ಹಲವು ಬಾರಿ ದಾಳಿ ನಡೆಸಿದೆ. ಆದರೆ ಲತಾಕಿಯ ಮೇಲಿನ ದಾಳಿ ಬಗ್ಗೆ ಮಾಹಿತಿ ಪಡೆಯಲು ಇಸ್ರೇಲ್ ಅಧಿಕಾರಿಗಳನ್ನು ಸಂಪರ್ಕಿಸಿದರೂ, ಅವರಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಲತಾಕಿಯ ನಗರದ ಶಸ್ತ್ರಾಸ್ತ್ರ ಸಂಗ್ರಹಾಲಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ’ ಎಂದು ಸಿರಿಯಾದಲ್ಲಿ ಬ್ರಿಟನ್ ಮೂಲದ ಮಾನವ ಹಕ್ಕುಗಳ ಮೇಲ್ವಿಚಾರಕ ಸಂಸ್ಥೆಯೊಂದು ಹೇಳಿದೆ.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.