ADVERTISEMENT

ಯೆಮೆನ್‌ ಬಂದರು ಗುರಿಯಾಗಿಸಿ ಇಸ್ರೇಲ್‌ ವೈಮಾನಿಕ ದಾಳಿ: ಮೂವರು ಸಾವು

ರಾಯಿಟರ್ಸ್
Published 21 ಜುಲೈ 2024, 4:27 IST
Last Updated 21 ಜುಲೈ 2024, 4:27 IST
<div class="paragraphs"><p>ಯೆಮೆನ್‌ ಬಂದರು ಗುರಿಯಾಗಿಸಿ ಇಸ್ರೇಲ್‌ ವೈಮಾನಿಕ ದಾಳಿ</p></div>

ಯೆಮೆನ್‌ ಬಂದರು ಗುರಿಯಾಗಿಸಿ ಇಸ್ರೇಲ್‌ ವೈಮಾನಿಕ ದಾಳಿ

   

ರಾಯಿಟರ್ಸ್‌ ಚಿತ್ರ

ಕೈರೊ: ಯೆಮೆನ್‌ನ ಬಂದರನ್ನು ಗುರಿಯಾಗಿಸಿ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 87 ಮಂದಿ ಗಾಯಗೊಂಡಿದ್ದಾರೆ. 

ADVERTISEMENT

ಟೆಲ್‌ ಅವೀವ್‌ ಮೇಲೆ ಇರಾನ್‌ ಬೆಂಬಲಿತ ಗುಂಪು ಡ್ರೋನ್‌ ದಾಳಿ ನಡೆಸಿದ ಒಂದು ದಿನ ಬಳಿಕ ಇಸ್ರೇಲಿ ಫೈಟರ್‌ ಜೆಟ್‌ಗಳು ಯೆಮನ್‌ನ ಹೊಡೆಡಾ ಬಂದರಿನ ಬಳಿ ದಾಳಿ ನಡೆಸಿದೆ.

ದಾಳಿಯಿಂದಾಗಿ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಂದರಿನಲ್ಲಿ ತೈಲ ಟ್ಯಾಂಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಯೆಮೆನ್‌ ಸುದ್ದಿವಾಹಿನಿ ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಯೆಮೆನ್‌ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್, ಶತ್ರುಗಳ ಮೇಲೆ ಪ್ರತಿದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.