ಬೈರೂತ್: ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಲೆಬನಾನ್‌ನ ಉತ್ತರ ಭಾಗದ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು 'ಲೆಬನೀಸ್ ರೆಡ್ ಕ್ರಾಸ್' ಸಂಘಟನೆ ಸೋಮವಾರ ಹೇಳಿದೆ.
'ಐಟೊ ಗ್ರಾಮದ ಮೇಲಿನ ದಾಳಿಯಿಂದಾಗಿ 18 ಮಂದಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ' ಎಂದಿರುವ ರೆಡ್ ಕ್ರಾಸ್, ಗ್ರಾಮವು ಕ್ರಿಶ್ಚಿಯನ್ನರು ಬಹುಸಂಖ್ಯೆಯಲ್ಲಿ ಇರುವ ಝಘ್ರತ ಜಿಲ್ಲೆಯಲ್ಲಿದೆ ಎಂದು ತಿಳಿಸಿದೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ 9 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಇದಕ್ಕೂ ಮೊದಲು ಹೇಳಿತ್ತು.
ಗ್ರಾಮದಲ್ಲಿರುವ ವಸತಿ ಸಮುಚ್ಚಯಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸುತ್ತಿದೆ ಎಂದು ನ್ಯಾಷನಲ್ ನ್ಯೂಸ್ ಏಜೆನ್ಸಿ ಸಹ ವರದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.