ADVERTISEMENT

ಫುಟ್‌ಬಾಲ್ | ಇಸ್ರೇಲ್ ಅಭಿಮಾನಿಗಳ ಮೇಲೆ ದಾಳಿ: ಪಿಎಂ ನೆತನ್ಯಾಹು ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2024, 5:56 IST
Last Updated 8 ನವೆಂಬರ್ 2024, 5:56 IST
<div class="paragraphs"><p>ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹಾಗೂ ಇಸ್ರೇಲಿಗಳ ಮೇಲಿನ ದಾಳಿ (ಬಲ)</p></div>

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹಾಗೂ ಇಸ್ರೇಲಿಗಳ ಮೇಲಿನ ದಾಳಿ (ಬಲ)

   

ರಾಯಿಟರ್ಸ್ ಚಿತ್ರ

ಆಮ್‌ಸ್ಟರ್‌ಡ್ಯಾಮ್‌ (ನೆದರ್ಲೆಂಡ್ಸ್): ಯುರೋಪಾ ಲೀಗ್‌ನಲ್ಲಿ ಆಡುವ ಇಸ್ರೇಲ್‌ನ 'ಮಕ್ಕಾಡಿ ಟೆಲ್‌ ಅವಿವ್‌' ಫುಟ್‌ಬಾಲ್‌ ಕ್ಲಬ್‌ನ ನೂರಾರು ಅಭಿಮಾನಿಗಳ ಮೇಲೆ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಗುರುವಾರ ರಾತ್ರಿ ದಾಳಿ ನಡೆದಿದೆ.

ADVERTISEMENT

ನೆದರ್ಲೆಂಡ್ಸ್‌ನ 'ಎಎಫ್‌ಸಿ ಅಜಕ್ಸ್‌' ತಂಡವು ಮಕ್ಕಾಡಿ ಟೆಲ್‌ ಅವಿವ್‌ ಎದುರು 5–0 ಗೋಲುಗಳ ಅಂತರದಿಂದ ಜಯಿಸಿತ್ತು. ಅದಾದ ನಂತರ, ದಾಳಿ ನಡೆದಿದೆ.

ದಾಳಿಕೋರರು ಪ್ಯಾಲೆಸ್ಟೀನ್‌ ಧ್ವಜಗಳನ್ನು ಹಿಡಿದಿರುವುದು ಹಾಗೂ 'ಫ್ರೀ ಪ್ಯಾಲೆಸ್ಟೀನ್‌' ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಪ್ಯಾಲೆಸ್ಟೀನ್‌ ಪರ ಘೋಷಣೆ ಕೂಗುವಂತೆ ಹಲ್ಲೆಗೊಳಗಾದ ಇಸ್ರೇಲ್‌ ಅಭಿಮಾನಿಗಳನ್ನು ಒತ್ತಾಯಿಸಿರುವುದೂ ಸೆರೆಯಾಗಿದೆ. ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯು ಈ ವಿಡಿಯೊವನ್ನು ಹಂಚಿಕೊಂಡಿದೆ.

ಇಸ್ರೇಲ್‌ ವಿದೇಶಾಂಗ ಸಚಿವ ಇಸ್ರೇಲ್‌ ಕಾಟ್ಜ್‌ ಅವರು, ಇಸ್ರೇಲಿಗಳು ಸುರಕ್ಷಿತವಾಗಿ ದೇಶದಿಂದ ಹೊರಗೆ ಬರಲು ನೆರವಾಗುವಂತೆ ನೆದರ್ಲೆಂಡ್ಸ್ ಸಚಿವರ ನೆರವು ಕೋರಿದ್ದಾರೆ.

ಆಮ್‌ಸ್ಟರ್‌ಡ್ಯಾಮ್‌ ಪ್ರಕರಣವನ್ನು 'ಅತ್ಯಂತ ಹಿಂಸಾತ್ಮಕ ದಾಳಿ' ಎಂದು ಖಂಡಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ತಮ್ಮ ನಾಗರಿಕರ ನೆರವಿಗೆ ತಕ್ಷಣವೇ ಎರಡು ಸೇನಾ ವಿಮಾನಗಳನ್ನು ಕಳುಹಿಸಲು ನಿರ್ದೇಶನ ನೀಡಿದ್ದಾರೆ.

ನೆದರ್ಲೆಂಡ್ಸ್ ಸರ್ಕಾರದ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿರುವುದಾಗಿ ಇಸ್ರೇಲ್‌ ಸೇನೆ ಶುಕ್ರವಾರ ‌ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.