ADVERTISEMENT

ಇಸ್ರೇಲ್ ದಾಳಿ: ಹಮಾಸ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 14:32 IST
Last Updated 9 ಜುಲೈ 2024, 14:32 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಡೀರ್ ಅಲ್–ಬಲಾಹ್ (ಗಾಜಾ ಪಟ್ಟಿ): ಗಾಜಾ ಪಟ್ಟಿಯಲ್ಲಿ ಮತ್ತೆ ಸಂಘಟಿತರಾಗುತ್ತಿರುವ ಉಗ್ರಗಾಮಿಗಳ ಶೋಧಕ್ಕಾಗಿ, ಇಸ್ರೇಲ್‌ ಸೇನಾಪಡೆಯು ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಿರುಸುಗೊಳಿಸಿದೆ.

ಹಮಾಸ್ ಬಂಡುಕೋರರು ಹಾಗೂ ಇಸ್ರೇಲ್‌ ಸೇನೆ ನಡುವಿನ ಸಂಘರ್ಷ ಗಾಜಾ ಪಟ್ಟಿಯಲ್ಲಿ ಹೆಚ್ಚಲಿರುವುದರಿಂದ, ಇಲ್ಲಿ ನೆಲೆಸಿದ್ದ ಸಹಸ್ರಾರು ಪ್ಯಾಲೆಸ್ಟೀನಿಯನ್ನರು ಈ ಪ್ರದೇಶವನ್ನು ತೊರೆದು, ಸುರಕ್ಷಿತ ಸ್ಥಳಗಳನ್ನು ಅರಸಿ ಸೋಮವಾರ ವಲಸೆ ಹೊರಟರು. 

ADVERTISEMENT

ಗಾಜಾ ನಗರದಲ್ಲಿ ಈಚೆಗೆ ನಡೆದ ದಾಳಿಗಳು ಮತ್ತು ಸ್ಥಳಾಂತರವು, ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕುರಿತಂತೆ ದೀರ್ಘಾವಧಿಯಿಂದ ನಡೆಯುತ್ತಿರುವ ಮಾತುಕತೆಗೆ ಅಡ್ಡಿಯಾಗಬಹುದು ಎಂದು ಹಮಾಸ್ ಎಚ್ಚರಿಸಿದೆ.

ಉತ್ತರ ಗಾಜಾದಲ್ಲಿ ಬೀಡುಬಿಟ್ಟಿದ್ದ ಉಗ್ರಗಾಮಿಗಳನ್ನು ಸದೆಬಡಿಯಲಾಗಿದೆ ಎಂದು ತಿಂಗಳ ಹಿಂದಷ್ಟೇ ಹೇಳಿದ್ದ ಇಸ್ರೇಲ್ ಸೇನೆಯು, ಇದೀಗ ಈ ಭಾಗದಲ್ಲೇ ಮತ್ತೆ ಉಗ್ರರೊಂದಿಗೆ ಹೋರಾಟ ನಡೆಸಿದೆ. ದಾಳಿಗೆ ಮುನ್ನ ಸೇನೆಯು ಸ್ಥಳಾಂತರಕ್ಕೆ ಸೂಚಿಸಿದೆ.

‘ನಾವು ಎಲ್ಲಿಯೂ ಸುರಕ್ಷಿತರಾಗಿಲ್ಲ’ ಎಂದು ಪ್ಯಾಲೆಸ್ಟೀನಿಯನ್ನರು ಹೇಳಿದ್ದಾರೆ. 23 ಲಕ್ಷ ಜನರು ಸ್ಥಳಾಂತರಗೊಂಡಿದ್ದು, ಟೆಂಟ್‌ಗಳಲ್ಲಿ ನೆಲೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.