ಜೆರುಸಲೇಂ: ಸಿರಿಯಾ ಗುರಿಯಾಗಿಸಿಕೊಂಡು ಭಾನುವಾರ ಬೆಳಿಗ್ಗೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇಸ್ರೇಲ್‌ನತ್ತ ಸಿರಿಯಾ ಆರು ರಾಕೆಟ್‌ಗಳನ್ನು ಪ್ರಯೋಗಿಸಿದ ಬೆನ್ನಲ್ಲೇ ಈ ಪ್ರತಿದಾಳಿ ನಡೆದಿದೆ.
‘ಇಸ್ರೇಲ್ ಯುದ್ಧವಿಮಾನಗಳು ಸಿರಿಯಾದ ನಾಲ್ಕನೇ ಡಿವಿಷನ್‍ನ ಕಾಂಪೌಂಡ್, ರೇಡಾರ್ ಹಾಗೂ ಫಿರಂಗಿ ಸಂಗ್ರಹಾಲಯ ಸೇರಿದಂತೆ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿವೆ’ ಎಂದು ತಿಳಿಸಿದೆ.
ಸಿರಿಯಾ ರಾಕೆಟ್ ದಾಳಿಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ‘ಸಿರಿಯಾಗೆ ವಿಧೇಯವಾಗಿರುವ ಡಮಾಸ್ಕಸ್ ಮೂಲದ ಪ್ಯಾಲೆಸ್ಟೀನ್ ಗುಂಪು ರಾಕೆಟ್ ದಾಳಿಯ ಹೊಣೆ ಹೊತ್ತಿದೆ’ ಎಂದು ಅಲ್–ಮಯದೀನ್ ಟಿ.ವಿ ವರದಿ ಮಾಡಿದೆ.
ಜೆರುಸಲೇಂನಲ್ಲಿ ಉಂಟಾಗಿರುವ ಉದ್ವಿಗ್ನತೆ ಮತ್ತು ಮುಸ್ಲಿಮರ ಮೂರನೇ ಅತ್ಯಂತ ಪವಿತ್ರ ಸ್ಥಳವಾದ ಅಲ್–ಅಕ್ಸಾ ಮಸೀದಿ ಸಂಕೀರ್ಣದ ಮೇಲೆ ಇಸ್ರೇಲ್ ಪೊಲೀಸರು ದಾಳಿ ನಡೆಸಿದ ನಂತರದಲ್ಲಿ ಉಭಯ ದೇಶಗಳ ನಡುವಣ ಸಂಘರ್ಷ ತೀವ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.