ADVERTISEMENT

‘ಯುದ್ಧ ಸಮಿತಿ’ ವಿಸರ್ಜಿಸಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 14:28 IST
Last Updated 17 ಜೂನ್ 2024, 14:28 IST
ಇಸ್ರೇಲ್‌ ಪ್ರಧಾನಿ ನೆತನ್ಯಾಹು
ಇಸ್ರೇಲ್‌ ಪ್ರಧಾನಿ ನೆತನ್ಯಾಹು    

ಟೆಲ್‌ ಅವಿವ್‌: ಪ್ಯಾಲೆಸ್ಟೀನ್‌ ಮೇಲೆ ಯುದ್ಧ ನಡೆಸಿಕೊಂಡು ಹೋಗುವ ಜವಾಬ್ದಾರಿಯೊಂದಿಗೆ ರಚಿಸಲಾಗಿದ್ದ ‘ಯುದ್ಧ ಕ್ಯಾಬಿನೆಟ್‌’ (ಸಮಿತಿ) ಅನ್ನು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ವಿಸರ್ಜಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಯುದ್ಧದ ಆರಂಭಿಕ ದಿನಗಳಲ್ಲಿ ದೇಶವನ್ನು ಬೆಂಬಲಿಸುವ ಸಲುವಾಗಿ ರಚಿಸಲಾಗಿದ್ದ ಈ ಸಮಿತಿಯನ್ನು ಸೇರಿಕೊಂಡಿದ್ದ ವಿಪಕ್ಷ ಸಂಸದ ಬೆನ್ನಿ ಗ್ಯಾಂಟ್ಜ್‌ ಅವರು ಸಮಿತಿಯಿಂದ ಹಿಂದೆ ಸರಿದ ಬಳಿಕ ಅದನ್ನು ವಿಸರ್ಜನೆ ಮಾಡಲಾಯಿತು ಎನ್ನಲಾಗಿದೆ. 

ಯುದ್ಧ ವಿರಾಮದ ನಡುವೆಯೂ ದಾಳಿ: 

ADVERTISEMENT

ಓಸ್ಲೊ : ಮಾನವೀಯ ನೆರವು ಪರಿಶೀಲಿಸಲು ಇಸ್ರೇಲ್‌ ಸೇನೆಯು ಭಾನುವಾರ ಯುದ್ಧ ವಿರಾಮವನ್ನು ಘೋಷಿಸಿದ ಹೊರತಾಗಿಯೂ ರಫಾ ಮತ್ತು ದಕ್ಷಿಣ ಗಾಜಾದ ಮೇಲೆ ಅದರ ದಾಳಿ ಮುಂದುವರಿದಿದೆ ಎಂದು ಯುಎನ್‌ಆರ್‌ಡಬ್ಲ್ಯುಎ ಮುಖ್ಯಸ್ಥ ಫಿಲಿಪ್‌ ಲಾಝಾರಿನಿ ಕಿಡಿಕಾರಿದ್ದಾರೆ.

ಪ್ಯಾಲೆಸ್ಟೀನ್‌ ಎನ್‌ಕ್ಲೇವ್‌ ಅನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ದೈನಂದಿನ ವಿರಾಮವನ್ನು ಘೋಷಿಸಿದ ಇಸ್ರೇಲ್‌ ಸೇನೆಯ ನಿರ್ಧಾರವನ್ನು ಭಾನುವಾರ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಟೀಕಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.