ADVERTISEMENT

ಗಾಜಾ ಶಾಲೆಯ ಮೇಲೆ ಇಸ್ರೇಲ್ ದಾಳಿ; ಮಕ್ಕಳೂ ಸೇರಿದಂತೆ ಕನಿಷ್ಠ 28 ಮಂದಿ ಸಾವು

ಏಜೆನ್ಸೀಸ್
Published 17 ಅಕ್ಟೋಬರ್ 2024, 14:04 IST
Last Updated 17 ಅಕ್ಟೋಬರ್ 2024, 14:04 IST
<div class="paragraphs"><p>ಇಸ್ರೇಲ್ ದಾಳಿಯ ದೃಶ್ಯ</p></div>

ಇಸ್ರೇಲ್ ದಾಳಿಯ ದೃಶ್ಯ

   

– ರಾಯಿಟರ್ಸ್ ಚಿತ್ರ

ಗಾಜಾ: ಉತ್ತರ ಗಾಜಾಪಟ್ಟಿಯ ಶಾಲೆಯೊಂದರಲ್ಲಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದ್ದ ಶಾಲೆಯ ಮೇಲೆ ಇಸ್ರೇಲ್‌ ಸೇನೆ ಗುರುವಾರ ದಾಳಿ ನಡೆಸಿದೆ. ಈ ವೇಳೆ ಮಕ್ಕಳೂ ಸೇರಿದಂತೆ ಕನಿಷ್ಠ 28 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ತಿಳಿಸಿದೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್‌, ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾಗಿ ಹೇಳಿಕೆ ಬಿಡುಗಡೆ ಮಾಡಿದೆ.

ದಾಳಿಯಲ್ಲಿ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆಯ ಅಧಿಕಾರಿ ಮೆದ್ಹತ್‌ ಅಬ್ಬಾಸ್‌ ಎಂಬವರು ತಿಳಿಸಿದ್ದಾರೆ. 'ಬೆಂಕಿ ನಂದಿಸಲು ನೀರೂ ಇಲ್ಲ. ಏನೇನೂ ಉಳಿದಿಲ್ಲ. ಇದು ಕಗ್ಗೊಲೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನಾಗರಿಕರು, ಮಕ್ಕಳು ಹತ್ಯೆಯಾಗಿದ್ದು, ಸುಟ್ಟು ಕರಕಲಾಗಿದ್ದಾರೆ' ಎಂದು ನೊಂದುಕೊಂಡಿದ್ದಾರೆ.

ಇಸ್ರೇಲ್‌ ಸೇನೆ, 'ಜಬಲಿಯಾದಲ್ಲಿರುವ ಅಬು ಹುಸ್ಸೇನ್‌ ಶಾಲೆಯು ನಿರಾಶ್ರಿತರ ನೆಲೆಯಾಗಿತ್ತು. ಅಲ್ಲಿ ಹಮಾಸ್‌ ಹಾಗೂ ಇಸ್ಲಾಮಿಕ್‌ ಜಿಹಾದ್‌ ಸಂಘಟನೆಗಳ ಉಗ್ರರು ಸಕ್ರಿಯರಾಗಿದ್ದರು. ದಾಳಿ ನಡೆದ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸಾಕಷ್ಟು ಉಗ್ರರು ಇದ್ದರು' ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.