ADVERTISEMENT

ಇಸ್ರೇಲ್: ನೆತನ್ಯಾಹು ನೇತೃತ್ವದ ಸರ್ಕಾರ ರಚನೆ ಯತ್ನ

ಏಜೆನ್ಸೀಸ್
Published 6 ಏಪ್ರಿಲ್ 2021, 13:39 IST
Last Updated 6 ಏಪ್ರಿಲ್ 2021, 13:39 IST
ಬೆಂಜಮಿನ್ ನೆತನ್ಯಾಹು
ಬೆಂಜಮಿನ್ ನೆತನ್ಯಾಹು   

ಟೆಲ್ ಅವಿವ್: ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವ ಇಸ್ರೇಲ್ ಅಧ್ಯಕ್ಷ ರೆಯುವೆನ್ ರಿವ್ಲಿನ್ ಸರ್ಕಾರ ರಚನೆಗೆ ಬಹುಮತ ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಭ್ರಷ್ಟಾಚಾರದ ಆರೋಪ ಹೊತ್ತಿರುವ ನೆತನ್ಯಾಹು ಅವರ ಆಯ್ಕೆಯನ್ನು ಮಂಗಳವಾರ ಜೆರುಸಲೇಂನಲ್ಲಿ ಇಸ್ರೇಲ್ ಅಧ್ಯಕ್ಷ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ನೆತನ್ಯಾಹು ಅವರ ಭ್ರಷ್ಟಾಚಾರದ ಪ್ರಕರಣ ಚರ್ಚೆ ಪುನರಾರಂಭವಾಗಿದೆ.

ಮಾರ್ಚ್ 23ರಂದು ನಡೆದ ಚುನಾವಣೆಯಲ್ಲಿ ನೆತನ್ಯಾಹು ಅವರ ಲಿಕುಡ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗಳಿಸುವಲ್ಲಿ ಸಫಲವಾಯಿತು. ಆದರೆ, ಯಾವುದೇ ಪಕ್ಷವು ಸೆನೆಟ್‌ನಲ್ಲಿ ಬಹುಮತವನ್ನು (61 ಸ್ಥಾನ) ಗಳಿಸಲಿಲ್ಲ. ಹಾಗಾಗಿ, ಸರ್ಕಾರವನ್ನು ರಚಿಸಲು ಯಾರಿಗೆ ಬಹುಮತ ಪಡೆಯಲು ಸಾಧ್ಯವಿದೆ ಎಂಬುದನ್ನು ನಿರ್ಧರಿಸಲು ಅಧ್ಯಕ್ಷ ರಿವ್ಲಿನ್ ಅವರನ್ನು ಕೋರಲಾಗಿತ್ತು.

ADVERTISEMENT

ಈ ಹಿನ್ನೆಲೆಯಲ್ಲಿ ಇಸ್ರೇಲ್ ಅಧ್ಯಕ್ಷರು ನೆತನ್ಯಾಹು ಅವರನ್ನು ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸರ್ಕಾರವನ್ನು ಮುನ್ನಡೆಸುವವರಿಗೆ ನೈತಿಕತೆ ಬೇಕೇ ಬೇಡವೇ ಎನ್ನುವ ಪ್ರಶ್ನೆಗಳೂ ಎದುರಾಗಿವೆ.

ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪವನ್ನು ನೆತನ್ಯಾಹು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.