ಬೈರೂತ್: ಸಿರಿಯಾದ ಕಾರ್ಮಿಕರು ವಾಸವಿದ್ದ ಕಟ್ಟಡದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಿಂದಾಗಿ 23 ಮಂದಿ ಸಾವಿಗೀಡಾಗಿದ್ದಾರೆ ಎಂದು ಲೆಬನಾನ್‌ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಸಿರಿಯಾ ಗಡಿಗೆ ಹೊಂದಿಕೊಂಡಿರುವ ಲೆಬನಾನ್‌ನ ಪೂರ್ವ ಬೆಕ್ಕಾ ಕಣಿವೆಯ ಪುರಾತನ ನಗರಿ ಬಾಲ್‌ಬೆಕ್‌ನಲ್ಲಿ ಬುಧವಾರ ರಾತ್ರಿ ದಾಳಿ ನಡೆದಿದೆ ಎಂದು ‘ದಿ ನ್ಯಾಷನಲ್ ನ್ಯೂಸ್ ಏಜೆನ್ಸಿ’ ವರದಿ ಮಾಡಿದೆ.
ಕಟ್ಟಡಗಳ ಅವಶೇಷಗಳಡಿಯಿಂದ 23 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಯುನೈನ್ ಗ್ರಾಮದ ಮೇಯರ್ ಅಲಿ ಕಸ್ಸಸ್ ಅವರನ್ನು ಉಲ್ಲೇಖಿಸಿ ವಾಹಿನಿ ವರದಿ ಮಾಡಿದೆ. ನಾಲ್ವರು ಸಿರಿಯನ್ನರು ಹಾಗೂ ಲೆಬನಾನ್ ನಾಗರಿಕರು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.