ADVERTISEMENT

ಕದನ ವಿರಾಮ ಪ್ರಸ್ತಾವ ತಿರಸ್ಕರಿಸಿ ದಾಳಿ ನಡೆಸಿದ ಇಸ್ರೇಲ್; 13 ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 15:05 IST
Last Updated 8 ಫೆಬ್ರುವರಿ 2024, 15:05 IST
-
-   

ರಫಾ (ಗಾಜಾ): ಯುದ್ಧ ವಿರಾಮಕ್ಕೆ ಹಮಾಸ್ ಬಂಡುಕೋರರು ಸಲ್ಲಿಸಿದ್ದ ಪ್ರಸ್ತಾವವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಿರಸ್ಕರಿಸಿದ ನಂತರದಲ್ಲಿ ಇಸ್ರೇಲ್ ಮಿಲಿಟರಿಯು ನಡೆಸಿದ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

ಮೃತರಲ್ಲಿ ಇಬ್ಬರು ಮಹಿಳೆಯರು, ಐದು ಮಂದಿ ಮಕ್ಕಳು ಇದ್ದಾರೆ ಎಂದು ಆ ಮೃತದೇಹಗಳನ್ನು ಸ್ವೀಕರಿಸಿರುವ ಆಸ್ಪತ್ರೆಯೊಂದು ತಿಳಿಸಿದೆ. ನಾಲ್ಕು ತಿಂಗಳಿನಿಂದ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ 27 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. 

ಗಾಜಾದ ಬೇರೆಡೆಗಳಿಂದ ನಿರಾಶ್ರಿತರಾದವರು ರಫಾದ ಶಿಬಿರಗಳಲ್ಲಿ ನೆಲೆಸಿದ್ದಾರೆ. ದಾಳಿಯನ್ನು ರಫಾ ಮೇಲೆಯೂ ವಿಸ್ತರಿಸಲು ಸಿದ್ಧತೆ ನಡೆದಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.