ADVERTISEMENT

ಪಶ್ಚಿಮ ದಂಡೆಯ ಬಂಧನ ಕಾರ್ಯಾಚರಣೆ: ಇಸ್ರೇಲ್‌ ಪಡೆಗಳಿಂದ ನಾಲ್ವರ ಹತ್ಯೆ

ಪಶ್ಚಿಮ ದಂಡೆಯ ಬಂಧನ ಕಾರ್ಯಾಚರಣೆ

ಏಜೆನ್ಸೀಸ್
Published 26 ಸೆಪ್ಟೆಂಬರ್ 2021, 13:05 IST
Last Updated 26 ಸೆಪ್ಟೆಂಬರ್ 2021, 13:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೆರುಸಲೇಂ: ‘ಹಮಾಸ್‌ನ ಇಸ್ಲಾಮಿಕ್ ಉಗ್ರ ಸಂಘಟನೆಯ ವಿರುದ್ಧ ಪಶ್ಚಿಮ ದಂಡೆಯ ಬಂಧನ ಕಾರ್ಯಾಚರಣೆಯಲ್ಲಿ ಇಸ್ರೇಲ್‌ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಪ್ಯಾಲೆಸ್ಟೀನಿ ಬಂದೂಕುಧಾರಿಗಳು ಹತರಾಗಿದ್ದಾರೆ’ ಎಂದು ಇಸ್ರೇಲ್ ಸೇನೆ ಭಾನುವಾರ ತಿಳಿಸಿದೆ.

‘ಉತ್ತರ ಪಶ್ಚಿಮ ದಂಡೆಯ ಬಳಿ ಒಬ್ಬ ಪ್ಯಾಲೆಸ್ಟೀನಿ ಹಾಗೂ ಜೆರುಸಲೇಂನ ಉತ್ತರ ಭಾಗದ ಬಿಡ್ಡು ಎಂಬಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ’ ಎಂದು ಪ್ಯಾಲೆಸ್ಟೀನಿ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.‌

ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಭದ್ರತಾ ಪಡೆಗಳು ಹಮಾಸ್ ಕಾರ್ಯಕರ್ತರ ವಿರುದ್ಧ ನಡೆಸಿರುವ ಬಂಧನ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು, ‘ಭಯೋತ್ಪಾದಕ ದಾಳಿಯನ್ನು ತಡೆಯುವ ಸಲುವಾಗಿ ಪಡೆಗಳಿಗೆ ಸರ್ಕಾರವು ಸಂಪೂರ್ಣ ಬೆಂಬಲವನ್ನು ನೀಡಿದೆ’ ಎಂದಿದ್ದಾರೆ.

ADVERTISEMENT

ಭಾನುವಾರ ನಡೆದ ಈ ಹಿಂಸಾಚಾರವು ಅತ್ಯಂತ ಭೀಕರವಾದುದು. ಗಾಜಾಪಟ್ಟಿ ಪ್ರದೇಶದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ 11 ದಿನಗಳ ಘರ್ಷಣೆಯಿಂದಾಗಿ ತೀವ್ರ ಉದ್ವಿಗ್ನತೆಯ ವಾತಾವರಣೆ ಉಂಟಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.