ADVERTISEMENT

ಲೆಬನಾನ್‌ನಲ್ಲಿ ನಿಲ್ಲದ ಇಸ್ರೇಲ್ ಆಕ್ರಮಣ: ಬೈರೂತ್‌ ಮೇಲೆ ಮತ್ತೆ ದಾಳಿ

ಏಜೆನ್ಸೀಸ್
Published 9 ನವೆಂಬರ್ 2024, 3:00 IST
Last Updated 9 ನವೆಂಬರ್ 2024, 3:00 IST
<div class="paragraphs"><p>ಇಸ್ರೇಲ್ ದಾಳಿಯಿಂದಾಗಿ ಬೈರೂತ್‌ನಲ್ಲಿ ಆವರಿಸಿದರುವ ದಟ್ಟ ಹೊಗೆ</p></div>

ಇಸ್ರೇಲ್ ದಾಳಿಯಿಂದಾಗಿ ಬೈರೂತ್‌ನಲ್ಲಿ ಆವರಿಸಿದರುವ ದಟ್ಟ ಹೊಗೆ

   

–ರಾಯಿಟರ್ಸ್ ಚಿತ್ರ

ಬೈರೂತ್‌: ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳ ಆಕ್ರಮಣ ಮುಂದುವರಿದಿದ್ದು, ಲೆಬನಾನ್ ರಾಜಧಾನಿ ಬೈರೂತ್‌ನ ಉಪನಗರಗಳ ಮೇಲೆ ಶುಕ್ರವಾರ ಮತ್ತೆ ದಾಳಿ ನಡೆಸಿದೆ.

ADVERTISEMENT

ಲೆಬನಾನ್‌ ವಿಶ್ವವಿದ್ಯಾಲಯದ ಸಮೀಪ ಹಾಗೂ ಬುರ್ಜ್ ಅಲ್‌ ಬರಜ್‌ನೆಹ್‌ನಲ್ಲಿ ಇಸ್ರೇಲ್ ವಾಯುದಾಳಿ ನಡೆಸಿದೆ ಎಂದು ಲೆಬನಾನ್‌ನ ಸರ್ಕಾರಿ ಮಾಧ್ಯಮ ಹೇಳಿದೆ.

ಎಚ್ಚರಿಕೆ ನೀಡದೆಯೇ ಅಲ್–ಜಾಮೌಸ್ ಮೇಲೂ ಇಸ್ರೇಲ್ ದಾಳಿ ನಡೆಸಿದೆ ಎಂದು ಅದು ಹೇಳಿದೆ. ದಾಳಿಯ ಭೀಕರ ಶಬ್ದ ಬೈರೂತ್‌ನಾದ್ಯಂತ ಕೇಳಿಸಿದೆ. ನಗರದ ಮೇಲೆ ದಟ್ಟ ಹೊಗೆ ಆವರಿಸಿದೆ. ದಾಳಿಯಿಂದಾದ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಸೆಪ್ಟೆಂಬರ್‌ನಿಂದ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ನಡೆಸುತ್ತಿದೆ. ಸೆಪ್ಟೆಂಬರ್ 23ರಿಂದ ಈವರೆಗೆ ಇಸ್ರೇಲ್ ಪಡೆಗಳ ಆಕ್ರಮಣಕ್ಕೆ 2,600 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವ ಫಿರಾಸ್ ಆಬಿದ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.