ADVERTISEMENT

ಇಸ್ರೇಲ್‌ ನಾಯಕರಿಗೆ ಬಂಧನದ ವಾರಂಟ್ ಬದಲು ಮರಣದಂಡನೆ ವಿಧಿಸಿ: ಇರಾನ್‌ ನಾಯಕ ಖಮೇನಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 9:44 IST
Last Updated 25 ನವೆಂಬರ್ 2024, 9:44 IST
<div class="paragraphs"><p>ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಇರಾನ್‌ನ ಸರ್ವೋಚ್ಛ ನಾಯಕ ಆಯತ್‌ ಉಲ್ಲಾ ಅಲಿ ಖಮೇನಿ</p></div>

ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಇರಾನ್‌ನ ಸರ್ವೋಚ್ಛ ನಾಯಕ ಆಯತ್‌ ಉಲ್ಲಾ ಅಲಿ ಖಮೇನಿ

   

ರಾಯಿಟರ್ಸ್‌ ಚಿತ್ರಗಳು

ದುಬೈ: ಇಸ್ರೇಲ್ ನಾಯಕರಿಗೆ ಬಂಧನ ವಾರಂಟ್‌ಗಳನ್ನು ಹೊರಡಿಸುವ ಬದಲು ಮರಣದಂಡನೆ ವಿಧಿಸಬೇಕು ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತ್‌ ಉಲ್ಲಾ ಅಲಿ ಖಮೇನಿ ಹೇಳಿದ್ದಾರೆ.

ADVERTISEMENT

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ಹಾಗೂ ಹಮಾಸ್‌ ಮುಖ್ಯಸ್ಥ ಮೊಹಮ್ಮದ್‌ ಡೀಫ್‌ ವಿರುದ್ಧ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಈಚೆಗೆ ಬಂಧನದ ವಾರಂಟ್‌ ಜಾರಿಗೊಳಿಸಿತ್ತು. ಈ ಕುರಿತು ಖಮೇನಿ ಪ್ರತಿಕ್ರಿಯಿಸಿದ್ದಾರೆ.

ಐಸಿಸಿಯ ಈ ಕ್ರಮವು ನೆತನ್ಯಾಹು ಅವರ ಸಂಚಾರಕ್ಕೆ ನಿರ್ಬಂಧ ವಿಧಿಸುತ್ತದೆ. ನ್ಯಾಯಾಲಯದ 124 ಸದಸ್ಯ ರಾಷ್ಟ್ರಗಳು ತಮ್ಮ ವ್ಯಾಪ್ತಿಯಲ್ಲಿ ಅವರನ್ನು ಬಂಧಿಸಬಹುದಾಗಿದೆ.

ಮಾನವೀಯತೆಯ ವಿರುದ್ಧದ ಅಪರಾಧ ಮತ್ತು 2023ರ ಅಕ್ಟೋಬರ್‌ 8ರಿಂದ ಅವರು ನಡೆಸಿರುವ ಯುದ್ಧಾಪರಾಧಗಳಿಗಾಗಿ ನೆತನ್ಯಾಹು ಮತ್ತು ಗ್ಯಾಲಂಟ್‌ ಅವರನ್ನು ಬಂಧಿಸಲು ವಾರಂಟ್‌ ಜಾರಿಗೊಳಿಸಲಾಗಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿತ್ತು. ಡೀಫ್‌ ವಿರುದ್ಧವೂ ಐಸಿಸಿ ವಾರಂಟ್‌ ಜಾರಿ ಮಾಡಿತ್ತು.

ದಕ್ಷಿಣ ಗಾಜಾದಲ್ಲಿ ಜುಲೈನಲ್ಲಿ ತಾನು ನಡೆಸಿದ ವೈಮಾನಿಕ ದಾಳಿಯಲ್ಲಿ ಡೀಫ್‌ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ಆಗಸ್ಟ್‌ನಲ್ಲಿ ಹೇಳಿತ್ತು. ಆದರೆ ಹಮಾಸ್‌ ಅದನ್ನು ನಿರಾಕರಿಸಿತ್ತು.

ಬೆಂಜಮಿನ್‌ ಖಂಡನೆ: ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಹೊರಡಿಸಿರುವ ಬಂಧನದ ವಾರಂಟ್‌ ಅನ್ನು ಖಂಡಿಸಿರುವ ಬೆಂಜಮಿನ್‌ ನೆತನ್ಯಾಹು ಅವರು, ‘ಈ ಅಸಂಬದ್ಧ ಮತ್ತು ಸುಳ್ಳು ಕ್ರಮಗಳನ್ನು ಇಸ್ರೇಲ್‌ ತಿರಸ್ಕರಿಸುತ್ತದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.